ಆಸ್ಪ್ರೇಲಿಯಾ ಬೀಚ್‌ನಲ್ಲಿ ವಾಕ್‌ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ 132 ವರ್ಷ ಹಳೆಯ ಬಾಟಲಿ ಸಂದೇಶ ಪತ್ರವೊಂದು ಸಿಕ್ಕಿದೆ. ಪತ್ರ ಜರ್ಮನ್‌ ಮಾದರಿಯಲ್ಲಿ ಮುದ್ರಿತವಾಗಿದ್ದು, ಅದರಲ್ಲಿ ಜರ್ಮನ್‌ ಹಸ್ತಲಿಖಿತವಿತ್ತು.

ಕ್ಯಾನ್‌ಬೆರ್ರಾ: ಆಸ್ಪ್ರೇಲಿಯಾ ಬೀಚ್‌ನಲ್ಲಿ ವಾಕ್‌ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ 132 ವರ್ಷ ಹಳೆಯ ಬಾಟಲಿ ಸಂದೇಶ ಪತ್ರವೊಂದು ಸಿಕ್ಕಿದೆ. ಪತ್ರ ಜರ್ಮನ್‌ ಮಾದರಿಯಲ್ಲಿ ಮುದ್ರಿತವಾಗಿದ್ದು, ಅದರಲ್ಲಿ ಜರ್ಮನ್‌ ಹಸ್ತಲಿಖಿತವಿತ್ತು.

ಇದರಲ್ಲಿದ್ದ ಸಂದೇಶ 1886, ಜೂ. 12ರ ದಿನಾಂಕವನ್ನು ಉಲ್ಲೇಖಿಸಿತ್ತು. ಈ ಬಗ್ಗೆ ಕುತೂಹಲ ಮೂಡಿ, ಸಂಶೋಧನೆ ನಡೆಸಿದಾಗ, ಇದು ಪೌಲಾ ನೌಕಾ ಮಾರ್ಗದಲ್ಲಿ ಜರ್ಮನ್‌ ಮೂಲದ ಸಣ್ಣ ನೌಕೆಯಿಂದ ಎಸೆಯಲ್ಪಟ್ಟಿದ್ದು ಎಂಬುದು ಗೊತ್ತಾಯಿತು. 1864ರಿಂದ 1933ರ ವರೆಗೆ ಜರ್ಮನ್‌ ನೌಕೆಗಳಿಂದ ಇಂತಹ ಸಾವಿರಾರು ಬಾಟಲಿಗಳನ್ನು ಎಸೆಯಲಾಗಿದೆ.

ನೌಕೆಗಳಿಗೆ ತಮ್ಮ ಮಾರ್ಗಗಳನ್ನು ದೃಢಪಡಿಸಲು ಮತ್ತು ಸಮದ್ರದ ಅಲೆಗಳ ಒತ್ತಡವನ್ನು ತಿಳಿಯಲು ಈ ರೀತಿ ಮಾಡಲಾಗುತಿತ್ತು ಎಂಬುದು ತಿಳಿದುಬಂತು.