ಸಿಕ್ಕಾ ಆಯ್ಕೆ ಮೂಲಕ ಮೊದಲ ಬಾರಿಗೆ ಕಂಪನಿಗೆ ಸಂಸ್ಥಾಪಕೇತರರನ್ನು ನೇಮಿಸಲಾಗಿತ್ತು.

ನವದೆಹಲಿ(ಆ.19): ವಿಶಾಲ್ ಸಿಕ್ಕಾ ಇನ್ಫೋಸಿಸ್ ಸಂಸ್ಥೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮತ್ತೆ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲ ನಾಯಕರಿಗಾಗಿ ಹುಡುಕಾಟ ಆರಂಭವಾಗಿದೆ.

ಮೂಲಗಳ ಪ್ರಕಾರ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಅವರನ್ನು ಈ ಹುದ್ದೆ ಮತ್ತೆ ಹುಡುಕಿಬಂದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಸಿಕ್ಕಾ ಆಯ್ಕೆ ಮೂಲಕ ಮೊದಲ ಬಾರಿಗೆ ಕಂಪನಿಗೆ ಸಂಸ್ಥಾಪಕೇತರರನ್ನು ನೇಮಿಸಲಾಗಿತ್ತು.

ಆದರೆ ಅವರ ಕಾರ್ಯಶೈಲಿ ಬಗ್ಗೆ ಇನ್ಫಿ ಸಂಸ್ಥಾಪಕ ಅಧ್ಯಕ್ಷ ಮೂರ್ತಿ ಹಲವು ಬಾರಿ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಮತ್ತೆ ಸಂಸ್ಥಾಪಕ ಸದಸ್ಯರೇ ಕಂಪನಿಯ ಚುಕ್ಕಾಣಿ ಹಿಡಿಯಬಹುದು. ಹೀಗಾಗಿ ನಂದನ್ ನಿಲೇಕಣಿ ಹೆಚ್ಚು ಸೂಕ್ತ ಅಭ್ಯರ್ಥಿ ಎಂಬ ವಿಶ್ಲೇಷಣೆಕೇಳಿಬಂದಿದೆ.