ನೋಟು ನಿಷೇಧ ವಿಚಾರವಾಗಿ ಸಂಸತ್ ಕಲಾಪವನ್ನು ಅಡ್ಡಿಪಡಿಸಿದ ಪ್ರತಿಪಕ್ಷಗಳ ನಡೆಯ ಬಗ್ಗೆ ಬಿಜೆಪಿ ಹಿರಿಯ ಮುಖಂಡ ಅಡ್ವಾಣಿ ಕಿಡಿ ಕಾರಿದ್ದಾರೆ.
ನವದೆಹಲಿ (ಡಿ.07): ನೋಟು ನಿಷೇಧ ವಿಚಾರವಾಗಿ ಸಂಸತ್ ಕಲಾಪವನ್ನು ಅಡ್ಡಿಪಡಿಸಿದ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡೆಯ ಬಗ್ಗೆ ಬಿಜೆಪಿ ಹಿರಿಯ ಮುಖಂಡ ಅಡ್ವಾಣಿ ಕಿಡಿ ಕಾರಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಬಳಿ ಅಡ್ವಾಣಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಕಲಾಪವನ್ನು ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಅಂತವರ ವೇತನವನ್ನು ಕಡಿತಗೊಳಿಸಬೇಕು ಎಂದು ಅಡ್ವಾಣಿ ಹೇಳಿದ್ದಾರೆ. ಸದನದಲ್ಲಿ ಗಲಾಟೆ ಮಾಡಿದವರನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್
ಹೊರಗೆ ಕಳುಹಿಸುವ ಹಾಗೆ ಸರ್ಕಾರ ದಾರಿ ಹುಡುಕಬೇಕು ಎಂದು ಅಡ್ವಾಣಿ ಹೇಳಿದ್ದಾರೆ.
