ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರ ನೆರವಿಗೆ 50 ಕೋಟಿ ರು. ಪರಿಹಾರ ನೀಡುವುದಾಗಿ ಉದ್ಯಮಿ ಅದಾನಿ ಫೌಂಡೇಷನ್‌ ಹೇಳಿದೆ. 

ನವದೆಹಲಿ: ಭಾರೀ ಮಳೆ ಹಾಗೂ ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರ ನೆರವಿಗೆ 50 ಕೋಟಿ ರು. ಪರಿಹಾರ ನೀಡುವುದಾಗಿ ಉದ್ಯಮಿ ಅದಾನಿ ಫೌಂಡೇಷನ್‌ ಹೇಳಿದೆ. 

ಈ ಬಗ್ಗೆ ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅದಾನಿ ಗ್ರೂಪ್‌, ‘ತಕ್ಷಣವೇ ಕೇರಳ ಮುಖ್ಯಮಂತ್ರಿ ಅವರ ವಿಪತ್ತು ಪರಿಹಾರ ನಿಧಿಗೆ 25 ಕೋಟಿ ರು. ನೀಡಲಾಗುತ್ತದೆ. 

ಬಳಿಕ ಇಷ್ಟೇ ಮೊತ್ತದ ಹಣದಲ್ಲಿ ಸಂತ್ರಸ್ತರಿಗೆ ಪುನಾವಸತಿ ಕಲ್ಪಿಸಲಾಗುತ್ತದೆ. ಅಲ್ಲದೆ, ಅದಾನಿ ಗ್ರೂಪ್‌ನ ನೌಕರರು ಒಂದು ದಿನದ ವೇತನವನ್ನು ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ನೀಡಲಿದ್ದಾರೆ,’ ಎಂದು ಹೇಳಿದೆ.