ಮೈಸೂರು(ಸೆ.24): ನಗರದಲ್ಲಿ ಇಂದಿನಿಂದ ಆರಂಭವಾದ ಶಾಪಿಂಗ್ ಫೆಸ್ಟಿವಲ್'ಗೆ ಸ್ಯಾಂಡಲ್'ವುಡ್ ನಟಿಯರು ಶಾಪಿಂಗ್ ಮಾಡಿ ರಂಗು ತುಂಬಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿ ಶೃತಿ, ಶ್ವೇತಾ ಶ್ರೀವಾತ್ಸವ ಹಾಗೂ ಅಮೃತ ಫೆಸ್ಟಿವಲ್'ನ ಸುತ್ತಲೂ ಅಡ್ಡಾಡಿ ತರಕಾರಿ ಸೇರಿದಂತೆ ಹಲವು ರೀತಿಯ ವಸ್ತುಗಳನ್ನು ಖರೀದಿಸಿದರು. ಜೊತೆಗೆ ಮಾರಾಟಗಾರರ ಕಷ್ಟಸುಖಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ನಟಿ ಶ್ವೇತಾ ಶ್ರೀವಾತ್ಸವ,ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಎಂದಿಗೂ ಎಂದೆಂದಿಗೂ ಇದೇ ರೀತಿಯ ಧೃಡ ನಿರ್ಧಾರ ತೆಗೆದುಕೊಳ್ಳಬೇಕು.ರಾಜಕಾರಣಿಗಳು ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡದಂತೆ ಮನವಿ ಮಾಡಿದರು.

ಮೈಸೂರಿನ ಮಹಾತ್ಮಗಾಂಧಿ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ರೈತರಿಂದ ತರಕಾರಿ ಖರೀದಿ ಮಾಡುವ ಮೂಲಕ ನಟಿಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ನಟಿ ಶೃತಿ ರೈತರೊಂದಿಗೆ ಬೆರೆತು, ಅವರ ಕಷ್ಟಗಳನ್ನ ಕೇಳುವ ಮೂಲಕ ಸ್ಪಂದಿಸಿದರು. ಇವರಿಗೆ ಶ್ರೀವಾತ್ಸವ ಹಾಗೂ ಅಮೃತಾ ಜೊತೆಯಾದರು.