Asianet Suvarna News Asianet Suvarna News

ಯಶ್ ಮನೆಯಲ್ಲಿ ಐಟಿ ಶೋಧ ಕಾರ್ಯ ಅಂತ್ಯ: ಸಿಕ್ಕಿದ್ದೇನು?

ಬರೋಬ್ಬರಿ 3 ದಿನಗಳ‌ ಕಾಲ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳ ಶೋಧ ಕಾರ್ಯ ಅಂತ್ಯವಾಗಿದೆ. ಹಾಗಾದ್ರೆ ಆದಾಯ ತೆರಿಗೆ ಅಧಿಕಾರಿಗಳಿಗೆ ಸಿಕ್ಕಿದ್ದೇನು?

IT raid end at Actor Yash residence in Kathreguppe
Author
Bengaluru, First Published Jan 5, 2019, 3:41 PM IST

ಬೆಂಗಳೂರು, [ಜ.05]:  ರಾಕಿಂಗ್ ಸ್ಟಾರ್ ಯಶ್ ಮನೆ ಮೇಲಿ ಐಟಿ ದಾಳಿ ಅಂತ್ಯವಾಗಿದ್ದು, ಒಟ್ಟು‌ 8 ಅಧಿಕಾರಿಗಳು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಯಶ್ ನಿವಾಸದಿಂದ ನಿರ್ಗಮಿಸಿದ್ದಾರೆ.

ಬರೋಬ್ಬರಿ 3 ದಿನಗಳ‌ ಕಾಲ ಶೋಧ ನಡೆಸಿದ್ದ ಐಟಿ ಅಧಿಕಾರಿಗಳು, ಮೊದಲ ತಂಡದ ನಾಲ್ವರು ಅಧಿಕಾರಿಗಳು ಎರಡು ಬ್ಯಾಗ್, 1 ಸೂಟ್ ಕೇಸ್ ಹಾಗೂ ಲಾಪ್ ಟಾಪ್ ತೆಗೆದುಕೊಂಡು ಹೋಗಿದ್ದಾರೆ.

ಯಶ್ ಮನೆಯಲ್ಲಿಯೇ ಐಟಿ ಅಧಿಕಾರಿಗಳು : ಮುಂದೇನು..?

ಇನ್ನು 2ನೇ ತಂಡದಲ್ಲಿದ್ದ ಇನ್ನುಳಿದ ನಾಲ್ವರು ತಮ್ಮ ಕೈಯಲ್ಲಿ ತಲಾ ಒಂದೊಂದು ಬ್ಯಾಗ್ ಹಿಡಿದುಕೊಂಡು ಯಶ್ ಮನೆಯಿಂದ ನಿರ್ಗಮಿಸಿದ್ದಾರೆ.

ಸೂಟ್ ಕೇಸ್ ನಲ್ಲಿ ಚಿನ್ನ, ಬೆಳ್ಳಿ, ಬ್ಯಾಂಕ್ ಡಿಟೇಲ್ಸ್, ಪೆನ್ ಡ್ರೈವ್ ಆರ್ಡ್ ಡಿಸ್ಕ್ ಚರಾಸ್ತಿ, ಸ್ಥಿರಾಸ್ಥಿ ಪತ್ರಗಳು, ಸಿನಿಮಾಗೆ ಸಂಬಂಧಿಸಿದ ಸಂಭಾವನೆಯ ಡಿಟೈಲ್ಸ್ ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಗುರುವಾರ ಬೆಳಗ್ಗೆ ಯಶ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದಾದ ಕೆಲ ಹೊತ್ತಿನಲ್ಲಿ ಯಶ್ ಮನೆ ಎರಡು ನೋಟ್ ಕೌಂಟಿಂಗ್ ಯಂತ್ರ ತರಿಸಿಕೊಂಡಿರುವುದು ನೋಡಿದ್ರೆ ಕಂತೆ ಕಂತೆ ಹಣ ಸಿಕ್ಕಿರುವ ಸಾಧ್ಯತೆಗಳಿವೆ.

Follow Us:
Download App:
  • android
  • ios