ಬೆಂಗಳೂರು(ಸೆ.22): ಖ್ಯಾತ ನಟ ದರ್ಶನ್​ ಮತ್ತು ಸಚಿವ ಶಾಮನೂರು ಶಿವಶಂಕರಪ್ಪ ಆಸ್ಪತ್ರೆ ಒತ್ತುವರಿ ತೆರವಿಗೆ ಕೊನೆಗೂ ಜಿಲ್ಲಾಡಳಿತ ಮುಂದಾಗಿದೆ. 

ರಾಜರಾಜೇಶ್ವರಿನಗರದ ಐಡಿಯಲ್‌ ಹೋಮ್ಸ್‌ ಬಡಾವಣೆಯಲ್ಲಿ ನಟ ದರ್ಶನ್‌ ಅವರ ಮನೆ ಹಾಗೂ ಶಾಮನೂರು ಶಿವಶಂಕರಪ್ಪ ಆಸ್ಪತ್ರೆ ಸೇರಿದಂತೆ 7 ಎಕರೆ, 31 ಗುಂಟೆ ಒತ್ತುವರಿ ಪ್ರದೇಶದಲ್ಲಿರುವ ಎಲ್ಲ ಕಟ್ಟಡಗಳನ್ನು ವಶಕ್ಕೆ ಪಡೆಯಲು ಜಿಲ್ಲಾಡಳಿತ ನಿರ್ಧರಿಸಿದೆ. 

ಈ ಕುರಿತು ಸುವರ್ಣ ನ್ಯೂಸ್​ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವಿ. ಶಂಕರ್​, ಕೆಲವೇ ದಿನಗಳಲ್ಲಿ ಮಾಲೀಕರಿಗೆ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದರು.

ದರ್ಶನ್ ಮನೆ ಮತ್ತು ಶಾಮನೂರು ಆಸ್ಪತ್ರೆ ರಾಜಾಕಾಲುವೆ ಒತ್ತುವರಿ ಮಾಡಿದೆ ವರದಿಯನ್ನು ಮೊದಲು ಸುವರ್ಣ ನ್ಯೂಸ್ ವರದಿ ಮಾಡಿತ್ತು. ಅಲ್ಲದೇ ಒತ್ತುವರಿ ಖಚಿತಪಡಿಸಿ ಭೂ ದಾಖಲೆಗಳ ಇಲಾಖೆ ಜಂಟಿ ನಿರ್ದೇಶಕ ಕೆ.ಜಯಪ್ರಕಾಶ್‌ ಸಲ್ಲಿಸಿದ್ದ ವರದಿಯನ್ನೂ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು.