ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಭದ್ರಕಾಳಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಮುಹೂರ್ತದಲ್ಲಿ ಚೇತನ್‌ ಚಂದ್ರ ಹಾಗೂ ರಚನಾ ಹೆಗಡೆ ಹೊಸ ಜೀವನಕ್ಕೆ ಕಾಲಿಟ್ಟರು.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ಭದ್ರಕಾಳಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಮುಹೂರ್ತದಲ್ಲಿ ಚೇತನ್ ಚಂದ್ರ ಹಾಗೂ ರಚನಾ ಹೆಗಡೆ ಹೊಸ ಜೀವನಕ್ಕೆ ಕಾಲಿಟ್ಟರು. ಇವರ ಮದುವೆಗೆ ಎರಡೂ ಕುಟುಂಬಗಳ ಬಂಧುಗಳು ಹಾಗೂ ಸ್ನೇಹಿತರು ಸಾಕ್ಷಿಯಾಗಿದ್ದರು. ‘ಪಿಯುಸಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟನಟ ಚೇತನ್ ಚಂದ್ರ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ನಟ ಯಶ್ ಜತೆಗೆ ನಟಿಸಿದ ‘ರಾಜಧಾನಿ' ಹಾಗೂ ‘ಪ್ರೇಮಿಸಂ' ಚಿತ್ರಗಳು. ಈ ಚಿತ್ರಗಳ ನಂತರ ಹುಚ್ಚುಡುಗ್ರು, ಕುಂಭರಾಶಿ, ಪ್ಲಸ್, ಜಾತ್ರೆ ಮುಂತಾದ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರು.
