ಲೈಂಗಿಕ ಶಕ್ತಿವರ್ಧಕ ಡ್ರಗ್ ಮಾರಾಟ : ಕಠಿಣ ಕ್ರಮ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 9:54 AM IST
Action Against Belagavi Drug Mafia
Highlights

ಲೈಂಗಿಕ ಶಕ್ತಿವರ್ಧಕ ಡ್ರಗ್ ಮಾಫಿಯಾ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಇದೀಗ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಳಗಾವಿ ಪಾಲಿಕೆ ಈ ನಿಟ್ಟಿನಲ್ಲಿ ವಿವಿಧೆಡೆ ತನ್ನ ಕಾರ್ಯಾಚರಣೆ ಕೈಗೊಳ್ಳುತ್ತಿದೆ. 

ಬೆಳಗಾವಿ: ಬೆಳಗಾವಿ ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿರುವ ಲೈಂಗಿಕ ಶಕ್ತಿವರ್ಧಕ ಡ್ರಗ್ಸ್ ಮಾರಾಟ ಅಂಗಡಿ ಮುಂಗಟ್ಟುಗಳ ವಿರುದ್ಧ ಪಾಲಿಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ಅಲ್ಲದೇ ಶಾಲಾ, ಕಾಲೇಜು ಸುತ್ತಮುತ್ತ ಇರುವ ಅಂಗಡಿಗಳಲ್ಲಿ ಮಾದಕ ವಸ್ತುಗಳು, ಸಿಗರೇಟ್ ಸೇರಿದಂತೆ ಇನ್ನಿತರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವುದರ ಜತೆಗೆ ಅಂಗಡಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡಲು ಕ್ರಮ ಕೈಗೊಂಡಿದೆ. 

ಗಡಿಭಾಗದಲ್ಲಿ ಮಾದಕ ವಸ್ತುಗಳ ಮಾರಾಟಕ್ಕೆ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಗಾಂಜಾ, ಅಫೀಮು, ಹೆರಾಯಿನ್ ಮತ್ತಿತರ ಮಾದಕ ವಸ್ತುಗಳು ಸಲೀಸಾಗಿ ವಿದ್ಯಾರ್ಥಿಗಳ ಕೈಸೇರುತ್ತಿದ್ದು, ಪೋಷಕರು ತೀವ್ರ ಆತಂಕ ಪಡುವಂತಾಗಿತ್ತು. ಅಲ್ಲದೇ ಲೈಂಗಿಕ ಶಕ್ತಿವರ್ಧಕ ಡ್ರಗ್ಸ್ ನಗರ ಹಾಗೂ ಗಡಿ ಭಾಗದಲ್ಲಿ ಎಲ್ಲೆಂದರಲ್ಲಿ ವ್ಯಾಪಕವಾಗಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಆ. 5 ರಂದು ಕನ್ನಡಪ್ರಭ ‘ಬೆಳಗಾವಿಯಲ್ಲಿ ಲೈಂಗಿಕ ಶಕ್ತಿವರ್ಧಕ ಡ್ರಗ್ಸ್’ ಮಾರಾಟದ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿ ನಿದ್ರೆಗೆ ಜಾರಿದ್ದ ಅಧಿಕಾರಿಗಳನ್ನು ಬಡಿದೆಬ್ಬಿಸುವ ಕೆಲಸ ಮಾಡಿತ್ತು. 

loader