ಕಾರಿನ ಟಯರ್ ಸಿಡಿದು ಐವರು ದುರ್ಮರಣಕ್ಕೀಡಾಗಿರುವ ಭೀಕರ ಘಟನೆ ಹಿರಿಯೂರು ತಾ. ಮೇಟಿಕುರ್ಕೆ ಗ್ರಾಮದ ಬಳಿ ನಡೆದಿದೆ. ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದಾರೆ. ನಾಲ್ವರಿಗೆ ಗಂಭೀರ ಗಾಯವಾಗಿದೆ.
ಚಿತ್ರದುರ್ಗ (ನ.25): ಕಾರಿನ ಟಯರ್ ಸಿಡಿದು ಐವರು ದುರ್ಮರಣಕ್ಕೀಡಾಗಿರುವ ಭೀಕರ ಘಟನೆ ಹಿರಿಯೂರು ತಾ. ಮೇಟಿಕುರ್ಕೆ ಗ್ರಾಮದ ಬಳಿ ನಡೆದಿದೆ. ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದಾರೆ. ನಾಲ್ವರಿಗೆ ಗಂಭೀರ ಗಾಯವಾಗಿದೆ.
ನಾಲ್ವರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬೆಂಗಳೂರಿನಿಂದ ಚಿತ್ರದುರ್ಗದ ಕಡೆ ಬರುತ್ತಿದ್ದ ಎರ್ಟಿಗಾ ಕಾರಿನ ಟಯರ್ ಬ್ಲಾಸ್ಟ್ ಆಗಿ ಸ್ಕಾರ್ಪಿಯಾಗೆ ಡಿಕ್ಕಿ ಹೊಡೆದಿದೆ. ಮೃತರು ಚಿತ್ರದುರ್ಗ ಮತ್ತು ಬೆಂಗಳೂರಿನ ಮೂಲದವರು ಎಂದು ತಿಳಿದು ಬಂದಿದೆ.
