ರಾಂಪುರದ ಹರ್ಷ ಡಾಬಾ ಬಳಿ ಸಂಚರಿಸುತ್ತಿದ್ದ ಲಾರಿಯ ಟೈರ್ ಸ್ಫೋಟಗೊಂಡು ಅಡ್ಡದಿಡ್ಡಿ ಚಲಿಸಿ ಅದೇ ರಸ್ತೆಯಲ್ಲಿ ಕೂಲಿ ಕಾರ್ಮಿಕರೊಂದಿಗೆ ಸಾಗುತ್ತಿದ್ದ ಟಾಟಾ ಏಸ್, 2 ಆಟೋಗಳಿಗೆ ಡಿಕ್ಕಿ ಹೊಡೆದಿದೆ.
ಚಿತ್ರದುರ್ಗ(ಮಾ.18): ಜಿಲ್ಲೆಯ ರಾಂಪುರ ಬಳಿ ಲಾರಿಯೊಂದು ಹಾಗೂ ಟಿಟಿ ಹಾಗೂ 2 ಆಟೋಗಳಿಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸ್ಥಳದಲ್ಲೇ ಮೃತಪಟ್ಟು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಂಪುರದ ಹರ್ಷ ಡಾಬಾ ಬಳಿ ಸಂಚರಿಸುತ್ತಿದ್ದ ಲಾರಿಯ ಟೈರ್ ಸ್ಫೋಟಗೊಂಡು ಅಡ್ಡದಿಡ್ಡಿ ಚಲಿಸಿ ಅದೇ ರಸ್ತೆಯಲ್ಲಿ ಕೂಲಿ ಕಾರ್ಮಿಕರೊಂದಿಗೆ ಸಾಗುತ್ತಿದ್ದ ಟಾಟಾ ಏಸ್, 2 ಆಟೋಗಳಿಗೆ ಡಿಕ್ಕಿ ಹೊಡೆದಿದೆ. ಟಾಟಾ ಏಸ್'ನಲ್ಲಿದ್ದ 11 ಮಂದಿ ಸ್ಥಳದಲ್ಲೆ ಸಾವನಪ್ಪಿದ್ದಾರೆ. ಗಾಯಗೊಂಡ 7 ಮಂದಿಯನ್ನು ಚಿತ್ರದುರ್ಗ,ಬಳ್ಳಾರಿ, ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
