ದೇಶದಲ್ಲಿ ಚುನಾವಣಾ ಕಾವು ಮಿತಿ ಮೀರುತ್ತಿದ್ದು ಇದೇ ವೇಳೆ ವಿವಿಧ ಪಕ್ಷಗಳಿಂದ ಪ್ರಚಾರ ಭರಾಟೆಯೂ ಕೂಡ ಜೋರಾಗಿದೆ. ಮೋದಿಯಂತೆಯೇ ಕಾಣುವ ಅಭಿನಂದನ್ ಪಾಟಕ್ ಇದೀಗ ಕಾಂಗ್ರೆಸ್ ಪರ ತಮ್ಮ ಪ್ರಚಾರವನ್ನು ಆರಂಭ ಮಾಡಿದ್ದಾರೆ. 

ಬಸ್ತರ್: ಪ್ರಧಾನಿ ನರೇಂದ್ರ ಮೋದಿ ರೀತಿ ಕಾಣುತ್ತ ಬಿಜೆಪಿ ಹಾಗೂ ಮಿತ್ರಪಕ್ಷಗಳ ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಗಮನ ಸೆಳೆಯುತ್ತಿದ್ದ ಅಭಿನಂದನ್ ಪಾಠಕ್ ಅವರು ಈಗ ಕಾಂಗ್ರೆಸ್ ಸೇರಿದ್ದು, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನ ನೆಚ್ಚಿನ ಪ್ರಚಾರಕರಾಗಿ ಹೊರ ಹೊಮ್ಮಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಅಚ್ಛೇ ದಿನ್ ಬರಲ್ಲ’ ಎಂದು ಖಚಿತ ಗೊಂಡ ಕಾರಣ ಕಾಂಗ್ರೆಸ್ ಸೇರಿದೆ ಎಂದರು. ಪ್ರಚಾರ ರ್ಯಾಲಿಗಳಲ್ಲಿ ಅವರು ಮೋದಿ ರೀತಿ ಹಾವಭಾವದಲ್ಲಿ ನಟಿಸಿ, ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ.

ಕೆಲವೇ ದಿನಗಳ ಹಿಂದಷ್ಟೇ ಅಭಿನಂದನ್ ಪಾಟಕ್ ಅವರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪರ ಪ್ರಚಾರ ಮಾಡುವುದಾಗಿ ಘೋಷಿಸಿಕೊಂಡಿದ್ದರು. ಕೇಂದ್ರ ಸರ್ಕಾರ ಭರವಸೆಗಳನ್ನಷ್ಟೇ ನೀಡಿ ಅದನ್ನು ಸಫಲ ಮಾಡುವಲ್ಲಿ ವಿಫಲವಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.