Asianet Suvarna News Asianet Suvarna News

ಲವ್ ಲೆಟರ್'ಗಳ ರಹಸ್ಯ ಬಿಚ್ಚಿಟ್ಟ ಡಿವಿಲಿಯರ್ಸ್

"ಸುಮಾರು 30 ಹುಡುಗಿಯರಿಗೆ ನೀಡಲೆಂದು ಪ್ರೇಮಪತ್ರ ಸಹ ಬರೆದಿದ್ದೆ. ಆದರೆ ನಾಚಿಕೆ ಸ್ವಭಾವದನಾದ ನಾನು ಒಬ್ಬರಿಗೂ ಅದನ್ನು ನೀಡುವ ಧೈರ್ಯ ಮಾತ್ರ ಮಾಡಲಿಲ್ಲ" ಎಂದು ವಿಲಿಯರ್ಸ್ ಹೇಳಿದ್ದಾರೆ

ab devilliers love letters secret
  • Facebook
  • Twitter
  • Whatsapp

ಮುಂಬೈ: ವಿಭಿನ್ನ ಬ್ಯಾಟಿಂಗ್ ಶೈಲಿಯಿಂದಾಗಿ ಕ್ರಿಕೆಟ್ ಜಗತ್ತಿನ ಮನಗೆದ್ದಿರುವ ಸ್ಫೋಟಕ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್'ಗೆ ಹುಡುಗಿಯರೆಂದರೆ ಸ್ವಲ್ಪ ನಾಚಿಕೆಯಂತೆ. ಆದರೆ, ತಾನೊಬ್ಬ ರೊಮ್ಯಾಂಟಿಕ್ ವ್ಯಕ್ತಿಯೂ ಹೌದು ಎಂದು ಅವರು ಹೇಳಿಕೊಂಡಿದ್ದಾರೆ. "ಶಾಲಾ ದಿನಗಳಲ್ಲಿ ನನಗೆ ಹಲವು ಹುಡುಗಿಯರ ಮೇಲೆ ಪ್ರೀತಿ ಹುಟ್ಟಿತ್ತು. ಸುಮಾರು 30 ಹುಡುಗಿಯರಿಗೆ ನೀಡಲೆಂದು ಪ್ರೇಮಪತ್ರ ಸಹ ಬರೆದಿದ್ದೆ. ಆದರೆ ನಾಚಿಕೆ ಸ್ವಭಾವದನಾದ ನಾನು ಒಬ್ಬರಿಗೂ ಅದನ್ನು ನೀಡುವ ಧೈರ್ಯ ಮಾತ್ರ ಮಾಡಲಿಲ್ಲ" ಎಂದು ವಿಲಿಯರ್ಸ್ ಹೇಳಿದ್ದಾರೆ. ತಾವು ಬರೆದ ಪ್ರೇಮಪತ್ರಗಳನ್ನು ಆಗ ಶಾಲೆಯಿಂದ ಪುನಃ ಮನೆಗೆ ಕೊಂಡೊಯ್ದು, ಅಟ್ಟದ ಮೇಲೆ ಬಚ್ಚಿಡುತ್ತಿದ್ದೆ ಎಂದು ವಿಲಿಯರ್ಸ್ ಹೇಳಿದ್ದಾರೆ.

"ಶಾಲೆಯಲ್ಲಿದ್ದಾಗ ನನಗೆ ಲೆಟರ್'ಗಳನ್ನು ಕೊಡುವ ಧೈರ್ಯವಿರಲಿಲ್ಲವಾದರೂ, ವಯಸ್ಸಾದಂತೆಲ್ಲಾ ಧೈರ್ಯ ತುಂಬಿಕೊಳ್ಳುತ್ತಾ ಹೋಯಿತು. ಪತ್ರ ಬರೆಯುವ ಕಲೆ ವಿವಾಹದ ಬಳಿಕ ಉಪಯೋಗಕ್ಕೆ ಬಂದಿತು. ಹೆಂಡತಿಗೆ ಒಂದಷ್ಟು ಪತ್ರಗಳನ್ನು ಬರೆದಿರುವೆ" ಎಂದು ಎಬಿಡಿ ಹೇಳಿಕೊಂಡಿದ್ದಾರೆ.

ಆರ್'ಸಿಬಿ ತಂಡದ ಪ್ರಮುಖ ಆಕರ್ಷಣೆಯಾಗಿರುವ ದಕ್ಷಿಣ ಆಫ್ರಿಕಾದ ಈ ಕ್ರಿಕೆಟಿಗ ಸದ್ಯ ಡೇನಿಯೆಲ್ ಸ್ವಾರ್ಟ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಅಬ್ರಹಾಂ ಎಂಬ 2 ವರ್ಷದ ಮಗುವಿದೆ. ಈಗ ಎರಡನೇ ಮಗುವಿಗೆ ಇವರ ಹೆಂಡತಿ ಗರ್ಭಿಣಿಯಾಗಿದ್ದಾರೆನ್ನಲಾಗಿದೆ.

epaper.kannadaprabha.in

Follow Us:
Download App:
  • android
  • ios