ಕೋಲಾರ[ಜು. 13]  ಟಿಕಿ ಟಾಕ್ ವಿಡಿಯೋ ಚಿತ್ರೀಕರಿಸಲು ಹೋಗಿ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಾರೆ. ಕೋಲಾರ ತಾಲೂಕಿನ ವಡಗೇರಿ ಗ್ರಾಮದ ಬಿಎ ಅಂತಿಮ ವ್ಯಾಸಂಗ ಮಾಡುತ್ತಿದ್ದ ಮಾಲಾ ಮೃತ ದುರ್ದೈವಿ.

ಕೃಷಿ ಹೊಂಡದ ಬಳಿ ಟಿಕಿ ಟಾಕ್ ವಿಡಿಯೋ ಚಿತ್ರೀಕರಿಸೋ ವೇಳೆ ದುರ್ಘಟನೆ ಸಂಭವಿಸಿದೆ. ಕೃಷಿ ಹೊಂಡಕ್ಕೆ ಬಿದ್ದು ಉಸಿರುಗಟ್ಡಿ ಮಾಲಾ ಸಾವನ್ನಪ್ಪಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಟಿಕ್ ಟಾಕ್ ದುರಂತ : ನೋಡ ನೋಡುತ್ತಿದ್ದಂತೆ ಕೆರೆಯಲ್ಲಿ ಮುಳುಗಿದ ಯುವಕ

ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಕೆರೆಯಲ್ಲಿ ಮುಳುಗಿ 24 ವರ್ಷದ ಯುವಕ ನದಿಯಲ್ಲಿ ಕೊಚ್ಚಿಹೋಗಿದ್ದು ಶುಕ್ರವಾರವಷ್ಟೆ ಸುದ್ದಿಯಾಗಿತ್ತು.