ಹಿರಿಯ ನಾಗರಿಕರಿಗೊಂದು ಸಂತಸ ಸುದ್ದಿ. ಇನ್ನು ಮುಂದೆ ‘ಹಿರಿಯ ನಾಗರಿಕ' ಗುರುತಿನ ಚೀಟಿ ಮಾತ್ರವಲ್ಲದೇ ಸರ್ಕಾರದಿಂದ ನೀಡುವ ಯಾವುದೇ ಅಧಿಕೃತ ಗುರುತಿನ ಚೀಟಿ ತೋರಿಸಿ ಹಿರಿಯ ನಾಗರಿಕರು ಶೇ.25ರಷ್ಟುರಿಯಾಯಿತಿ ದರದಲ್ಲಿ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಬೆಂಗಳೂರು(ಫೆ.23): ಹಿರಿಯ ನಾಗರಿಕರಿಗೊಂದು ಸಂತಸ ಸುದ್ದಿ. ಇನ್ನು ಮುಂದೆ ‘ಹಿರಿಯ ನಾಗರಿಕ' ಗುರುತಿನ ಚೀಟಿ ಮಾತ್ರವಲ್ಲದೇ ಸರ್ಕಾರದಿಂದ ನೀಡುವ ಯಾವುದೇ ಅಧಿಕೃತ ಗುರುತಿನ ಚೀಟಿ ತೋರಿಸಿ ಹಿರಿಯ ನಾಗರಿಕರು ಶೇ.25ರಷ್ಟುರಿಯಾಯಿತಿ ದರದಲ್ಲಿ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಈ ಮೊದಲು 60 ವರ್ಷ ಮೇಲ್ಪಟ್ಟವರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (ಸಾಮಾನ್ಯ, ವೇಗದೂತ, ರಾಜಹಂಸ ಬಸ್‌ಗಳಲ್ಲಿ ಮಾತ್ರ) ಪ್ರಯಾಣಿಸುವ ವೇಳೆ ಹಿರಿಯ ನಾಗರಿಕ ಗುರು​ತಿನ ಚೀಟಿ ತೋರಿಸುವುದು ಕಡ್ಡಾಯವಾಗಿತ್ತು. ಆದರೆ, ಎಲ್ಲಾ ಸಂದರ್ಭಗಳಲ್ಲಿ ಈ ಚೀಟಿ ಕೊಂಡೊಯ್ಯಲು ಸಾಧ್ಯವಾಗದರಿಂದ ಹಿರಿಯ ನಾಗರಿಕರಿಗೆ ತೊಂದರೆ​ಯಾಗು​ತ್ತಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಅಧಿಕೃತ ಗುರು​ತಿನ ಚೀಟಿಗಳನ್ನು ತೋರಿಸಿ ಪ್ರಯಾಣಿಸಬಹುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪಾಸ್‌ಪೋರ್ಟ್‌, ಚುನಾವಣಾ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಗುರುತಿನ ಚೀಟಿ, ವಾಸಸ್ಥಳ ಹಾಗೂ ಹುಟ್ಟಿದ ದಿನಾಂಕ ನಮೂದಿಸಿ ಸಾರ್ವಜನಿಕ ವಲಯ ಘಟಕಗಳಿಂದ(ಪಿಎಸ್‌ಯುಎಸ್‌) ವಿತರಿಸುವ ಗುರುತಿನ ಚೀಟಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ವಿತರಿಸುವ ಭಾವಚಿತ್ರವಿರುವ ಗುರುತಿನ ಚೀಟಿ, ನಿಗಮದಿಂದ ವಿತರಿಸುವ ಗುರುತು ಚೀಟಿ ತೋರಿಸಿ ಪ್ರಯಾಣಿಸಬಹುದು ಎಂದು ಪ್ರಕಟಣೆ ತಿಳಿಸಿದೆ.