Asianet Suvarna News Asianet Suvarna News

ಸುದೀಪ್ ಅಭಿನಯದ ‘ಈಗ’ ಹಿಂದಿ ಧಾರಾವಾಹಿ? ಸೂಪರ್ ಸ್ಟಾರ್ ಅದಕ್ಕೆ ಹೀರೊ

‘ಈ ಕುರಿತು ನಾನು ನಿಶ್ಚಯಿಸಿದ್ದೆ. ಆದರೆ, ಈಗ ಚಿತ್ರವನ್ನು ಹಿಂದಿಯಲ್ಲಿ ಟೀವಿ ಧಾರಾವಾಹಿ ನಿರ್ಮಾಣವಾಗುವ ಸಾಧ್ಯತೆಯಿರುವುದರಿಂದ ಈಗ-2 ಕೈಗೂಡಲಿಲ್ಲ,’ ಎಂದು ಹೇಳಿದ್ದಾರೆ.

A television series on SS Rajamoulis Telugu superhit Eega
  • Facebook
  • Twitter
  • Whatsapp

ಮುಂಬೈ(ಮೇ.04): ಕನ್ನಡಿಗ ಸುದೀಪ್ ಅಭಿನಯದ 2012ರ ತೆಲುಗು ಸೂಪರ್ ಹಿಟ್ ಚಿತ್ರ ‘ಈಗ’ ಹಿಂದಿ ಧಾರವಾಹಿಯಾಗುವ ಸಾಧ್ಯತೆ ಇದೆ ಎಂದು, ‘ಈಗ’ ಚಿತ್ರಕಥೆ ಬರೆದಿದ್ದ, ಕೆ.ವಿ.ವಿಜಯೇಂದ್ರ ಪ್ರಸಾದ್ (ಎಸ್.ಎಸ್.ರಾಜವೌಳಿ ಅವರ ತಂದೆ) ಹೇಳಿದ್ದಾರೆ. ಎಸ್.ಎಸ್. ರಾಜವೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ‘ಈಗ’ದ ಮುಂದುವರಿದ ಭಾಗವಾಗಿರುವ ‘ಈಗ-2’ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಅಭಿನಯಿಸಲಿದ್ದಾರೆ ಎಂಬ ಸುದ್ದಿಗಳ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ ಪ್ರಸಾದ್, ‘ಈ ಕುರಿತು ನಾನು ನಿಶ್ಚಯಿಸಿದ್ದೆ. ಆದರೆ, ಈಗ ಚಿತ್ರವನ್ನು ಹಿಂದಿಯಲ್ಲಿ ಟೀವಿ ಧಾರಾವಾಹಿ ನಿರ್ಮಾಣವಾಗುವ ಸಾಧ್ಯತೆಯಿರುವುದರಿಂದ ಈಗ-2 ಕೈಗೂಡಲಿಲ್ಲ,’ ಎಂದು ಹೇಳಿದ್ದಾರೆ.

Follow Us:
Download App:
  • android
  • ios