ಉತ್ತರ ಪ್ರದೇಶವನ್ನು ‘ಸ್ಕ್ಯಾಮ್‌’ನಿಂದ (SCAM) ಮುಕ್ತಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನಿನ್ನೆಯಷ್ಟೇ ನೀಡಿದರು. ಈ SCAM ಪದಕ್ಕೆ ಹೊಸತೊಂದು ವ್ಯಾಖ್ಯಾನವನ್ನೂ ನೀಡಿದ್ದರು. ಇದೀಗ  ಇವರ ಈ ಮಾತಿಗೆ ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದಾರೆ.

ಉತ್ತರ ಪ್ರದೇಶ(ಫೆ.05): ಉತ್ತರ ಪ್ರದೇಶವನ್ನು ‘ಸ್ಕ್ಯಾಮ್‌’ನಿಂದ (SCAM) ಮುಕ್ತಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನಿನ್ನೆಯಷ್ಟೇ ನೀಡಿದರು. ಈ SCAM ಪದಕ್ಕೆ ಹೊಸತೊಂದು ವ್ಯಾಖ್ಯಾನವನ್ನೂ ನೀಡಿದ್ದರು. ಇದೀಗ ಇವರ ಈ ಮಾತಿಗೆ ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದಾರೆ.

SCAM ಪದಕ್ಕೆ ಹೊಸ ವ್ಯಾಖ್ಯಾನ ನೀಡಿದ್ದ ಪ್ರಧಾನಿ ಮೋದಿ, ಸ್ಕ್ಯಾಮ್‌ ಎಂದರೆ ಸಮಾಜವಾದಿ ಪಕ್ಷ , ಕಾಂಗ್ರೆಸ್, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಎಂದು ಮೋದಿ ಅವರು ವಿವರಿಸಿದ್ದರು. ಎಸ್‌ಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ತಮ್ಮ ಉಳಿವಿಗಾಗಿ ಚುನಾವಣಾ ಮೈತ್ರಿ ಮಾಡಿಕೊಂಡಿವೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಆದರೆ ಈಗ ಈ ಹೇಳಿಕೆಗೆ ತಿರುಗೇಟು ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸ್ಕ್ಯಾಮ್‌ನಲ್ಲಿ A ಅಂದರೆ ಅಮಿತ್ ಶಾ, M ಅಂದರೆ ಮೋದಿ. ಈ ದೇಶವನ್ನು ಅಮಿತ್ ಶಾ ಮತ್ತು ಮೋದಿಯಿಂದ ಕಾಪಾಡಿ ಎಂದಿದ್ದಾರೆ.