ಗೌಡ್ರಂತೆ ನಾನು 7ನೇ ತರಗತಿಯಲ್ಲಿ 7 ಸಲ ಫೇಲ್ ಆಗಿಲ್ಲ : ಎ.ಮಂಜು

First Published 26, Jan 2018, 11:19 AM IST
A Manju Attack On Devegowda
Highlights

‘ನಾನು ನಿಮ್ಮಂತೆ ಏಳನೇ ಕ್ಲಾಸ್‌ನಲ್ಲಿ ಏಳು ಸಾರಿ ಫೇಲ್ ಆಗಿ ಮಂತ್ರಿಯಾಗಿಲ್ಲ. ನಾನು ಡಬಲ್ ಗ್ರಾಜುಯೇಟ್ ಆಗಿ ಸ್ವಂತ ಶಕ್ತಿಯಿಂದ ಸಚಿವನಾಗಿದ್ದೇನೆ’ ಎಂದು ಪಶುಸಂಗೋಪನಾ ಸಚಿವ ಎ. ಮಂಜು ಅವರು ಮಾಜಿ ಪ್ರಧಾನಿ  ಎಚ್.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಜ.26): ‘ನಾನು ನಿಮ್ಮಂತೆ ಏಳನೇ ಕ್ಲಾಸ್‌ನಲ್ಲಿ ಏಳು ಸಾರಿ ಫೇಲ್ ಆಗಿ ಮಂತ್ರಿಯಾಗಿಲ್ಲ. ನಾನು ಡಬಲ್ ಗ್ರಾಜುಯೇಟ್ ಆಗಿ ಸ್ವಂತ ಶಕ್ತಿಯಿಂದ ಸಚಿವನಾಗಿದ್ದೇನೆ’ ಎಂದು ಪಶುಸಂಗೋಪನಾ ಸಚಿವ ಎ. ಮಂಜು ಅವರು ಮಾಜಿ ಪ್ರಧಾನಿ  ಎಚ್.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಸ್ಥಳೀಯ ಸಂಸದರೂ ಆಗಿರುವ ದೇವೇಗೌಡರು ಹಾಸನ ಡೀಸಿ ರೋಹಿಣಿ ಸಿಂಧೂರಿ ದಾಸರಿ ವರ್ಗಾವಣೆ ವಿಚಾರದಲ್ಲಿ ಸಚಿವ ಮಂಜು ವಿರುದ್ಧ ಏಕವಚನದಲ್ಲಿ ಮಾತನಾಡಿರುವುದಕ್ಕೆ ಗುರುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ‘ವಯಸ್ಸಾದವರು ವಯಸ್ಸಿಗೆ ತಕ್ಕಂತೆ ಮಾತಾಡಬೇಕು.

ದೇವೇಗೌಡರು ಸೋತು ಮನೆಯಲ್ಲಿ ಕುಳಿತಿದ್ದಾಗ ನನ್ನ ಬಳಿಗೆ ಸಹಾಯ ಕೇಳಿಕೊಂಡು ಬಂದಿದ್ದರು. ನಾನು ಅವರ ಹಂಗಿನಲ್ಲಿಲ್ಲ. ಅವರು ನನ್ನ ಹಂಗಿನಲ್ಲಿದ್ದಾರೆ’ ಎಂದು ಟೀಕಿಸಿದರು.

loader