ಮೆಕ್ಸಿಕೋ[ಜು.10] ಈ ಅಮಾನುಷ ಘಟನೆ ನಡೆದಿದ್ದು ಜುಲೈ 4 ರಂದು. 91 ವರ್ಷದ ರೋಡಾಲ್ಫೋ ರೋಡಿಗ್ರೋಜ್ ತಮ್ಮ ಮೇಲೆ ಆದ ಹಲ್ಲೆಯನ್ನು ವಿವರಿಸುತ್ತಿದ್ದರೆ ಕಣ್ಣಂಚಿನಲ್ಲಿ ನೀರು ಬರುತ್ತದೆ. ಈಗ ನನಗೆ ನಡೆದಾಡಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳುವುದನ್ನು ಕೇಳಿದರೆ ಕರುಳು ಹಿಂಡಿದಂತಾಗುತ್ತದೆ.

ಬರುವ ಸೆಪ್ಟೆಂಬರ್ ಗೆ ವಯೋವೃದ್ಧರಿಗೆ 92 ವರ್ಷ ತುಂಬುತ್ತದೆ. ತನ್ನ ಮೊಮ್ಮಗನ ಮನೆಗೆ ತೆರಳಿದ್ದ ವಯೋವೃದ್ಧಿನಿಗೆ ತಾನು ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳಿಂದ ಏಟು ತಿನ್ನಬೇಕಾಗುತ್ತದೆ ಎಂಬ ಅರಿವು ಇರಲೇ ಇಲ್ಲ. ಊಟವಾದ ನಂತರ ವಾಯುವಿಹಾರಕ್ಕೆ  ತೆರಳಿದ್ದೆ. ನಾನು ಅವಳ ಕಡೆ ನೋಡಿಯೂ ಇಲ್ಲ, ಅವಳ ಮಗುವನನ್ು ಸಹ ಮುಟ್ಟಲಿಲ್ಲ. ಆದರೆ ಇದ್ದಕ್ಕಿದ್ದಂತೆ ವ್ಯಘ್ರಗೊಂಡ ಮಹಿಳೆ ಹತ್ತಿರದಲ್ಲಿ ಬಿದ್ದಿದ್ದ ಇಟ್ಟಿಗೆ ತೆಗೆದುಕೊಂಡು ನನ್ನ ಮೇಲೆ ಹಲ್ಲೆ ಮಾಡಿದಳು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರಯವ ಅಜ್ಜ ಹೇಳುತ್ತಾರೆ.

ಮಹಿಳೆ ಹಲ್ಲೆ ಮಾಡಿದ ನಂತರ ನನ್ನದೇ ತಪ್ಪು ಎಂದು ಪರಿಭಾವಿಸಿದ ನಾಲ್ಕಾರು ಜನರು ಅವಳೊಂದಿಗೆ ಸೇರಿಕೊಂಡು ಮನಸೋ ಇಚ್ಛೆ ಹಲ್ಲೆ ಮಾಡಿದರು. ಸ್ಥಳೀಯರಿಗೆ ನನ್ನ ಪರಿಚಯವಿದ್ದರೂ ಹಲ್ಲೆ ತಡೆಯಲಿಲ್ಲ ಎಂದು ಅಜ್ಜ ನೋವು ತೋಡಿಕೊಳ್ಳುತ್ತಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಮಹಿಳೆ ಪತ್ತೆ ಮಾಡುವಂತೆ ಕೋರಿಕೊಳ್ಳಲಾಗಿದೆ. ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಅಜ್ಜ ಇದೀಗ ನಡೆದಾಡಲು ಅಸಾಧ್ಯವಾದ ಸ್ಥಿತಿಯಲ್ಲಿ ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದಾರೆ.