ಮೃತ ಭಿಕ್ಷುಕನ ಬಳಿ ಸಿಕ್ತು ಭಾರೀ ಪ್ರಮಾಣದ ಹಣ

ಬೆಂಗಳೂರಿನಲ್ಲಿ ಮೃತ ಭಿಕ್ಷುಕನೋರ್ವನ ಬಳಿಕ ಭಾರೀ ಪ್ರಮಾಣದಲ್ಲಿ ಹಣವು ಪತ್ತೆಯಾಗಿದೆ. ಆತ ಮೃತನಾದ ಬಳಿಕ ಪರಿಶೀಲನೆ ವೇಳೆ ಆತನ ಬಳಿ 96 ಸಾವಿರ ಹಣ ದೊರೆತಿದೆ. 

90 thousand Money Found With Beggar After Death In Bengaluru

ಬೆಂಗಳೂರು :  ಮೃತಪಟ್ಟ ಭಿಕ್ಷುಕನ ಆತನ ಬಳಿ .96 ಸಾವಿರ ಪತ್ತೆಯಾದ ಘಟನೆ ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಮೃತರನ್ನು ಷರೀಫ್‌ (70) ಎಂದು ಗುರುತಿಸಲಾಗಿದೆ. ಷರೀಫ್‌ 12 ವರ್ಷಗಳಿಂದ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. 

ಕಳೆದ ಐದು ವರ್ಷಗಳಿಂದ ಷರೀಫ್‌ರಿಗೆ ಗ್ಯಾಂಗ್ರಿನ್‌ ಆಗಿದ್ದರಿಂದ ಕಾಲೊಂದನ್ನು ಕತ್ತರಿಸಿ ಕೃತಕ ಕಾಲು ಅಳವಡಿಸಲಾಗಿತ್ತು. ಮಂಗಳವಾರ ಬೆಳಗ್ಗೆ 10ರ ಸುಮಾರಿಗೆ ಷರೀಫ್‌ ರೈಲ್ವೆ ನಿಲ್ದಾಣದ ಬಳಿ ಮೂತ್ರ ಮಾಡಲು ತೆರಳಿ ವೇಳೆ ಸಾವನ್ನಪ್ಪಿದ್ದಾರೆ. ಈ ವೇಳೆ ಷರೀಫ್‌ ಅವರ ಕೃತಕ ಪ್ಲಾಸ್ಟಿಕ್‌ ಕಾಲಿನಲ್ಲಿ 500, 100, 50 ಹಾಗೂ 20 ಮುಖ ಬೆಲೆಯ ಒಟ್ಟು .96,700 ಹಣ ಪತ್ತೆಯಾಗಿದೆ.

ಮೃತರು ಭಿಕ್ಷೆ ಬೇಡಿ ಕೊಟ್ಟಿರುವ ಹಣ ಎಂದು ತಿಳಿದು ಬಂದಿದೆ. ಕುಟುಂಬಸ್ಥರು ಯಾರು ಇಲ್ಲದ ಕಾರಣ ಹಣವನ್ನು ಜಪ್ತಿ ಮಾಡಲಾಗಿದ್ದು, ಸಹಜವಾಗಿ ಮೃತಪಟ್ಟಿದ್ದಾರೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios