ಜಬಲ್‌ಪುರ(ನ.11): ಒಂದಲ್ಲ, ಎರಡಲ್ಲ ಬರೋಬ್ಬರಿ 27 ವರ್ಷದಿಂದ ಆಯೋಧ್ಯೆ ಶ್ರೀರಾಮನ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಕಲಿಯುಗದ ಈ ಶಬರಿ ಉರ್ಮಿಳಾ ಚತುರ್ವೇದಿ. ಮಧ್ಯಪ್ರದೇಶದ ಜಬಲಪುರ ನಿವಾಸಿಯಾಗಿರು ಉರ್ಮಿಳಾ 1992ರಿಂದ ಕೇವಲ ಬಾಳೇ ಹಣ್ಣು ಹಾಗೂ ಚಹಾ ಸೇವಿಸಿ, ಶ್ರೀರಾಮನಿಗಾಗಿ ಕಾಯುತ್ತಿದ್ದಾರೆ. ಆಯೋಧ್ಯೆ ತೀರ್ಪು ಬಂದಾಗ ಕುಟುಂಬಸ್ಥರೆಲ್ಲಾ ತಮ್ಮ ಅಜ್ಜಿಯ ವೃತ ಅಂತ್ಯವಾಗುತ್ತೆ ಎಂದು ಭಾವಿಸಿದ್ದರು. ಆದರೆ ಹಾಗಾಗಲಿಲ್ಲ.

ಇದನ್ನೂ ಓದಿ: ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

ಸುಪ್ರೀಂ ಕೋರ್ಟ್ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಲು ಗ್ರೀನ್ ಸಿಗ್ನಲ್ ನೀಡೋ ಮೂಲಕ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಕೋಟ್ಯಾಂತರ ಭಾರತೀಯರ ನಂಬಿಕೆಯನ್ನು ಎತ್ತಿ ಹಿಡಿದಿದೆ. ಈ ತೀರ್ಪು ಕಳೆದ 27 ವರ್ಷಗಳಿಂದ ಬಾಳೇ ಹಣ್ಣು ಹಾಗೂ ಚಹಾ ಮಾತ್ರ ಸೇವಿಸುತ್ತಾ ವನವಾಸ ನಡೆಸುತ್ತಿರುವ ಉರ್ಮಿಳಾ ಚತುರ್ವೇದಿಗೂ ಸಂತಸ ತಂದಿದೆ. ಆದರೆ ತಮ್ಮ ಸಂಕಲ್ವ ಈಡೇರದೆ ಉಪವಾಸ ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ತೀರ್ಪು: ನೊಂದ ಕುಟುಂಬಕ್ಕೆ ಸಂತಸದ ಜೊತೆ ಸಾಂತ್ವನ.

1992ರಲ್ಲಿ ಆಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಧ್ವಂಸದ ಬಳಿಕ ದೇಶದ ಸಾಮರಸ್ಯ ಕದಡಿತ್ತು. ಹಿಂಸಾಚಾರಗಳು ಭುಗಿಲೆದ್ದಿತ್ತು. ಎರಡು ಕೋಮಿನ ಬಾಂಧವರು ಬೀದಿ ಬೀದಿಗಳಲ್ಲಿ ಬಡಿದಾಡಿಕೊಂಡರು. ಹಿಂಸೆ, ರಕ್ತಪಾತ ನೋಡಿದ ಉರ್ಮಿಳಾ, ಅಂದೇ ಆಹಾರ ನಿಲ್ಲಿಸಿ ಉಪವಾಸ ಆರಂಭಿಸಿದ್ದಾರೆ. ಆಯೋಧ್ಯೆ ವಿವಾದ ಅಂತ್ಯವಾಗಿ, ಶ್ರೀರಾಮನ ಅನುಗ್ರಹ ಪಡೆಯುವ ವರೆಗೂ ತಾನೂ ಆಹಾರ ಸೇವಿಸುವಿದಿಲ್ಲ. ಉಸಿರಾಡಲು ಬಾಳೇ ಹಣ್ಣು ಸೇವಿಸುತ್ತೇನೆ ಎಂದು ಶಪಥ ಮಾಡಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ಸಂಕಲ್ಪದ ಮಹಾಯಜ್ಞ: ವರ್ಷ ಕಳೆದು ಅದೇ ದಿನ ಪ್ರಕಟವಾಯ್ತು ತೀರ್ಪು

1992ರ ಬಳಿಕ ಆಯೋಧ್ಯ ವಿವಾದ ಮತ್ತಷ್ಟು ಬಿಗಡಾಯಿಸಿತು. ಪ್ರಕರಣ ಇತ್ಯರ್ಥ ವಿಳಂಬವಾಗತೊಡಗಿತು. ತಮ್ಮ ಜೀವಿತಾವಧಿಯಲ್ಲಿ ಆಯೋಧ್ಯೆ ಪ್ರಕರಣ ಇತ್ಯರ್ಥವಾಗುತ್ತೆ ಅನ್ನೋ ನಂಬಿಕೆ ಕ್ಷೀಣಿಸಿತು. ಆದರೆ ನವೆಂಬರ್ 9 ರಂದು ಮುಂಜಾನೆಯಿಂದ ಟಿವಿ ಮುಂದೆ ಕೂತ ಉರ್ಮಿಳಾ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಕ್ಕೆ ಕಾಯುತ್ತಿದ್ದರು. ಆಯೋಧ್ಯೆ ಶ್ರೀರಾಮನಿಗೆ ಎಂದಾಗ ಉರ್ಮಿಳಾ ಸಂತಸಕ್ಕೆ ಪಾರವೇ ಇರಲಿಲ್ಲ. ಇಷ್ಟು ವರ್ಷ ಉಪವಾಸ ಮಾಡಿದ್ದು ಸಾರ್ಥಕಾವಾಯಿತು ಎಂದಿದ್ದಾರೆ. 

ಇದನ್ನೂ ಓದಿ: ಅಯೋಧ್ಯೆ ತೀರ್ಪು: 93ರ ಇಳಿ ವಯಸ್ಸಿನಲ್ಲೂ ಹಿಂದು ಪರ ವಾದಿಸಿದ್ದ ಪರಾಶರನ್

ತೀರ್ಪು ರಾಮನ ಪರವಾಗಿದೆ. ತೀರ್ಪ ಬಂದ ಬೆನ್ನಲ್ಲೇ ಕುಟುಂಬಸ್ಥರು ಆಹಾರ ಸೇವಿಸಲು ತನಿಸುಗಳನ್ನು ತಂದಿಟ್ಟಿದ್ದಾರೆ. ಆದರೆ ಆಯೋಧ್ಯೆಯಲ್ಲಿ ಶ್ರೀರಾಮನ ಮಂದಿರವಾದ ಬಳಿಕ, ರಾಮನ ದರ್ಶನ ಪಡೆದು ಆಹಾರ ಸೇವಿಸುತ್ತೇನೆ. ನನ್ನ ಶಪಥದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. 27 ವರ್ಷದಿಂದ ಬಾಳೇ ಹಣ್ಣು ತಿಂದು ಸಣ್ಣಗಾಗಿದ್ದೇನೆ. ಶರೀರ ಶಕ್ತಿ ಕಳೆದುಕೊಂಡಿದೆ. ಆದರೆ ರಾಮನ ಜಪ ಮಾಡುತ್ತಾ ಮಾನಸಿಕವಾಗಿ ಗಟ್ಟಿಯಾಗಿದ್ದೇನೆ. ಆತ್ಮವಿಶ್ವಾಸದಿಂದ ಇದ್ದೇನೆ ಎಂದು ಉರ್ಮಿಳಾ ಹೇಳಿದ್ದಾರೆ.