Asianet Suvarna News Asianet Suvarna News

ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿಕೊಂಡ 8 ಯೋಧರು

ಸಿಯಾಚಿನ್ ನಲ್ಲಿ ಹಿಮಪಾತ/ ಹಿಮದಡಿ ಸಿಲುಕಿಕೊಂಡ 8 ಜನ ಯೋಧರು/ ಮುಂದುವರಿದ ಶೋಧ ಕಾರ್ಯ/ ಸೋಮವಾರ ಮಧ್ಯಾಹ್ನ ಹಿಮಪಾತ

8 Soldiers Trapped In Snow After Avalanche In Siachen Rescue On
Author
Bengaluru, First Published Nov 18, 2019, 10:15 PM IST

ನವದೆಹಲಿ[ನ. 18]  ಸಿಯಾಚಿನ್ ನಲ್ಲಿ ಮತ್ತೆ ಹಿಮಪಾತದ ಆತಂಕ ಕಂಡುಬಂದಿದೆ. ಸಿಯಾಚಿನ್ ಹಿಮಪ್ರದೇಶದಲ್ಲಿ ಇಂದು ಮಧ್ಯಾಹ್ನ ಹಿಮಪಾತವಾದ ಕಾರಣ ಇಬ್ಬರು ಸ್ಥಳೀಯರು ಮೃತಪಟ್ಟಿದ್ದು, 8 ಜನ ಸೈನಿಕರು ಹಿಮದಡಿ ಸಿಲುಕಿಕೊಂಡಿದ್ದಾರೆ.

ಸಿಯಾಚಿನ್​ನ 18 ಸಾವಿರ ಅಡಿ ಎತ್ತರದ ಹಿಮಶ್ರೇಣಿಯಲ್ಲಿ ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಹಿಮಪಾತ ಸಂಭವಿಸಿದೆ. ಹಿಮದಡಿ ಸಿಲುಕಿರುವ ಸೈನಿಕರ ರಕ್ಷಣಾ ಕಾರ್ಯಾಚರಣೆ  ಮುಂದುವರಿದಿದೆ. ಯೋಧರು ಎಂದಿನಂತೆ ಗಸ್ತಿನಲ್ಲಿದ್ದಾಗ ಈ ಅವಘಡ ಸಂಭವಿಸಿದೆ. ಹಿಮದಡಿ ಸಿಲುಕಿರುವ ಯೋಧರಿಗಾಗಿ ಶೋಧ ಮುಂದುವರಿದಿದೆ.

ನೆನೆ ನೆನೆ ಹನುಮಂತಪ್ಪ ಕೊಪ್ಪದ್ ಅವರನ್ನ

2016ರ ಹನುಮಂತಪ್ಪ ಪ್ರಕರಣದ ಕಹಿ ನೆನಪು: 2016ರಲ್ಲಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ಸಾವಿಗೀಡಾಗಿದ್ದರು. ಜೀವನ್ಮರಣ ಹೋರಾಟ ನಡೆಸಿದ್ದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರಿಗೆಮರಣೋತ್ತರ ಶೌರ್ಯ ಪ್ರಶಸ್ತಿ ನೀಡಲಾಗಿತ್ತು.

 

Follow Us:
Download App:
  • android
  • ios