ನವದೆಹಲಿ(ಜ.15): ಸಾವಿಗೇ ಸವಾಲು ಹಾಕಿ, ಸಿಯಾಚಿನ್`​ನಲ್ಲಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಹುತಾತ್ಮನಾದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರಿಗೆ ಭಾರತೀಯ ಸೇನೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪದ ಪತ್ನಿ ಮಹಾದೇವಿ ಶೌರ್ಯ ಪ್ರಶಸ್ತಿ ಸ್ವೀಕರಿಸಿದರು.

2016ರ ಫೆಬ್ರವರಿಯಲ್ಲಿ ಹಿಮಪಾತದಲ್ಲಿ ಸಿಲುಕಿಕೊಂಡಿದ್ದ ಕೊಪ್ಪದ್, 6 ದಿನಗಳ ಕಾಲ ಹಿಮದ ನಡುವೆಯೇ ಹೋರಾಡಿದ್ದರು. ಧಾರವಾಡದ ಕುಂದಗೋಳದ ಬೆಟದೂರು ಗ್ರಾಮದ ಹನುಮಂಪ್ಪ ಕೊಪ್ಪದ್, ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಲ್ಯಾನ್ಸ್​ ನಾಯಕ್ ಆಗಿದ್ದ ಹನುಮಂತಪ್ಪ ಅವರ ಜೀವರಕ್ಷಣೆಗೆ ವೈದ್ಯರು ಹರಸಾಹಸ ನಡೆಸಿದ್ದರೂ ಯಶಸ್ವಿಯಾಗಿರಲಿಲ್ಲ. ಆದರೆ, ಹನುಮಂತಪ್ಪ ಅವರ ಆ ಹೋರಾಟ, ಪ್ರತಿಯೊಬ್ಬನಿಗೂ ಸ್ಫೂರ್ತಿ ಎಂದು ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಬಣ್ಣಿಸಿದ್ದಾರೆ.