ಮೈತ್ರಿ ಸರ್ಕಾರದಿಂದ ಮೊದಲ ಹಂತದಲ್ಲಿ 30 ಸ್ಥಾನಗಳಿಗೆ ನೇಮಕ ಕಾಂಗ್ರೆಸ್ ಗೆ 20 ಹಾಗೂ ಜೆಡಿಎಸ್ ಗೆ ಹತ್ತು ಸ್ಥಾನ  

ಬೆಂಗಳೂರು[ಜೂ.25]: ಮೈತ್ರಿ ಸರ್ಕಾರದ ನಿಗಮ ಮಂಡಳಿ ಸ್ಥಾನಗಳಿಗೆ ಪಟ್ಟಿ ಸಿದ್ಧವಾಗಿದ್ದು ಮೊದಲ ಹಂತದಲ್ಲಿ 30 ಸ್ಥಾನಗಳಿಗೆ ನೇಮಿಸುವುದು ಬಹುತೇಕ ಖಚಿತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮನ್ವಯ ಸಮಿತಿಯಲ್ಲಿ ಇಪ್ಪತ್ತು ಸ್ಥಾನ ಕಾಂಗ್ರೆಸ್ ಗೆ ಹಾಗೂ ಹತ್ತು ಸ್ಥಾನ ಜೆಡಿಎಸ್ ಗೆ ಎಂದು ನಿರ್ಧರಿಸಲಾಗಿದೆ. ಈ ಪೈಕಿ ಜೆಡಿಎಸ್ ನ ಮೊದಲ ಪಟ್ಟಿ ಸಿದ್ದವಾಗಿದ್ದು ಈ ಭಾರಿಯೂ ಪರಿಷತ್ ಸದಸ್ಯರಿಗೆ ನಿಗಮ ಮಂಡಳಿ ಸ್ಥಾನ ಅನುಮಾನವಾಗಿದೆ. 

ಜೆಡಿಎಸ್ನಿಂದ ಬಹುತೇಕ ಆಯ್ಕೆಯಾಗುವ ಸಂಭವನೀಯರ ಪಟ್ಟಿ

1. ಎಚ್ ಕೆ ಕುಮಾರಸ್ವಾಮಿ, ಸಕಲೇಶಪುರ
2. ಶಿವಲಿಂಗೇ ಗೌಡ - ಅರಸೀಕೆರೆ
3. ರವೀಂದ್ರ ಶ್ರೀಕಂಠಯ್ಯ - ಶ್ರೀರಂಗ ಪಟ್ಟಣ.
4. ಶ್ರೀನಿವಾಸಗೌಡ - ಕೋಲಾರ
5. ಗೌರೀಶಂಕರ್ - ತುಮಕೂರು ಗ್ರಾಮಾಂತರ.
6. ಸತ್ಯ ನಾರಾಯಣ - ಶಿರಾ
7. ದೇವಾನಂದ ಚೌಹಾಣ್ - ನಾಗಠಾಣ 
8. ರಾಜಾ ವೆಂಕಟಪ್ಪ ನಾಯಕ - ಮಾನ್ವಿ