ಭೀಕರ ಬಸ್ ಅಪಘಾತ : 7 ಮಂದಿ ಸ್ಥಳದಲ್ಲೇ ಸಾವು

7 killed as bus falls into gorge in Shimla
Highlights

ಭೀಕರ ಬಸ್ ಅಪಘಾತ ಒಂದರಲ್ಲಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅನೇಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದೆ.

ಶಿಮ್ಲಾ : ಭೀಕರ ಬಸ್ ಅಪಘಾತ ಒಂದರಲ್ಲಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅನೇಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದೆ.

ಸಿರ್ ಮುರ್ ಜಿಲ್ಲೆಯ ರಾಜ್ ಗರ್ ಪ್ರದೇಶದಲ್ಲಿ ತೆರಳುವ ವೇಳೆ  ಖಾಸಗಿ ಬಸ್  ಕಂದಕಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಬಸ್ ಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು,  ಬಸ್ ನಲ್ಲಿದ್ದವರಲ್ಲಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ರಾಜ್ ಗರ್ ಪ್ರದೇಶದ ಸನೋರಾ ನೇರಿ ಪಲ್ ಪ್ರದೇಶದಿಂದ 25 ಕಿ.ಮೀ ಅಂತರದಲ್ಲಿ ಅಪಘಾತ ಸಂಭವಿಸಿದೆ.  ಸ್ಥಳಕ್ಕೆ  ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಅಲ್ಲದೇ ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಜೆಸಿಬಿಗಳನ್ನು ಬಳಕೆ ಮಾಡಿ ಅಪಘಾತ ಸ್ಥಳದಿಂದ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ. 

loader