ಕೆಲ ದಿನಗಳ ಹಿಂದಷ್ಟೇ ತಮ್ಮ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿ 25 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಬೆಂಜ್ ಕಾರು ನೀಡಿದ್ದ ಉದ್ಯಮಿ ಇದೀಗ 600 ಮಂದಿಗೆ ಮತ್ತೆ ಕಾರುಗಳನ್ನು ನೀಡುತ್ತಿದ್ದಾರೆ

ಸೂರತ್ : ವಜ್ರದ ವ್ಯಾಪರಿಯೋರ್ವ ತನ್ನ ನೌಕರರಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡುತ್ತಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮಲ್ಲಿ ಕಾರ್ಯ ನಿರ್ವಹಿಸುವ ಒಟ್ಟು 600 ಮಂದಿಗೆ ಕಾರುಗಳನ್ನು ಉಡುಗೊರೆ ನೀಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಸಾವ್ಜಿ ದೊಲಾಕಿಯ ಅವರು ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಕೆಲಸಗಾರರಿಗೆ ದೀಪಾವಳಿ ಬೋನಸ್ ಸಿಗುತ್ತಿದೆ. ತಮ್ಮ ಕೆಲಸಗಾರರ ಕೌಶಲ್ಯ ಮಾಡು ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಳ ಮಾಡುವ ಸಲುವಾಗಿ ಈ ರೀತಿಯ ಬಂಪರ್ ಬೋನಸ್ ನೀಡಿ ಪ್ರೋತ್ಸಾಹಿಸಲಾಗುತ್ತದೆ. 

ಹರಿಕಿಶನ್ ಎಕ್ಸ್ ಪೋರ್ಟ್ ಎನ್ನುವ ಕಂಪನಿಯಲ್ಲಿ ಕಾರ್ಯನಿರ್ವಹಿಸುವ 600 ಮಂದಿ ಮಾರುತಿ ಸುಜುಕಿ ಸೆಲೆರಿಯೋ ಕಾರುಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳಲಿದ್ದಾರೆ. 

ಇನ್ನು ಕಂಪನಿಯಲ್ಲಿ ಕೆಲಸ ಮಾಡುವ ಒಟ್ಟು 6000 ಸಾವಿರ ಮಂದಿಗೆ ಯಜಮಾನ ಹಬ್ಬದ ಔತಣವನ್ನೂ ಕೂಡ ಏರ್ಪಡಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಇದೇ ವ್ಯಾಪಾರಿ ತಮ್ಮ ಕಂಪನಿಯಲ್ಲಿ 25 ವರ್ಷ ಪೂರೈಸಿದ್ದ ಮೂವರು ನೌಕರರಿಗೆ ಬೆಂಜ್ ಕಾರು ನೀಡಿದ್ದರು. ಇದೀಗ 600 ಮಂದಿಗೆ ಕಾರುಗಳನ್ನು ನೀಡುತ್ತಿದ್ದಾರೆ.