ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಯುದ್ದ ವಿಮಾನಗಳನ್ನು ಹೈವೆಯಲ್ಲಿ ರಸ್ತೆಯಲ್ಲಿ ಇಳಿಸೋ ಮೂಲಕ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಚರಿತ್ರೆ ಬರೆದಿದ್ದಾರೆ.

ಲಕ್ನೋ (ನ.21): ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಯುದ್ದ ವಿಮಾನಗಳನ್ನು ಹೈವೆಯಲ್ಲಿ ರಸ್ತೆಯಲ್ಲಿ ಇಳಿಸೋ ಮೂಲಕ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಚರಿತ್ರೆ ಬರೆದಿದ್ದಾರೆ.

ಲಕ್ನೋ ಹಾಗೂ ಆಗ್ರಾ ನಡುವೆ ಸಂಪರ್ಕ ಕಲ್ಪಿಸುವ 308 ಕಿಲೋ ಮೀಟರ್ ವಿಸ್ತೀರ್ಣದ ಸೂಪರ್ ಹೈವೆಯಲ್ಲಿ ಭಾರತೀಯ ಸೇನೆಗೆ ಸೇರಿದ 8 ಯುದ್ದ ವಿಮಾನಗಳು ಟೆಕ್ ಆಪ್ ಹಾಗೂ ಲ್ಯಾಂಡಿಂಗ್ ಮಾಡಿವೆ.

ಕೇವಲ 23 ತಿಂಗಳಲ್ಲಿ ಪೂರ್ಣಗೊಂಡು ದೇಶದಲ್ಲೇ ಅತ್ಯಂತ ವೇಗದ ರಸ್ತೆ ಎಂದೇ ಖ್ಯಾತಿ ಪಡೆದಿರುವ ಈ ರಸ್ತೆ 308 ಕಿಲೋ ಮೀಟರ್ ಉದ್ದಕ್ಕೂ ತಡೆ ರಹಿತ ಪ್ರಯಾಣಕ್ಕೆ ಸಾಕ್ಷಿಯಾಗಿದೆ. ರಸ್ತೆಯ ಗುಣಮಟ್ಟ ಹಾಗೂ ರಸ್ತೆಯ ನುಣುಪನ್ನು

ಸಾಬೀತುಪಡಿಸುವ ದೃಷ್ಟಿಯಿಂದ ಈ ವಿನೂತನ ಪ್ರಯತ್ನಕ್ಕೆ ಅಖಿಲೇಶ್ ಯಾದವ್ ಮುನ್ನುಡಿ ಬರೆದಿದ್ದಾರೆ.