ಬೆಂಗಳೂರು [ಆ.11]:  ರಾಜ್ಯ ಸಚಿವ ಸಂಪುಟ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ ಎಂಬ ಕೊರತೆಯು ನಾಡು ಇತ್ತೀಚಿನ ವರ್ಷಗಳಲ್ಲಿ ಕಂಡ ಭೀಕರ ಪ್ರವಾಹ ಪರಿಹಾರ ಕಾಮಗಾರಿಗಳ ನಿರ್ವಹಣೆಯನ್ನು ಬಾಧಿಸದಂತೆ ಮಾಡಲು ರಾಜ್ಯ ಸರ್ಕಾರವು ಹಿರಿಯ ಐಎಎಸ್‌ ಅಧಿಕಾರಿಗಳ ತಂಡ ರಚಿಸಿ, ಸದರಿ ಹೊಣೆಗಾರಿಕೆಯನ್ನು ಅವರಿಗೆ ಹೊರಿಸಿದೆ.

ಪ್ರವಾಹ ಪರಿಹಾರ ಕಾರ್ಯಗಳ ಕುರಿತು ಮೇಲ್ವಿಚಾರಣೆ ವಹಿಸಲು ಆರು ಐಎಎಸ್‌ ಅಧಿಕಾರಿಗಳನ್ನು ಜಿಲ್ಲಾ ಮೇಲುಸ್ತುವಾರಿಯಾಗಿ ಹಾಗೂ 59 ಕೆಎಎಸ್‌ ಹಾಗೂ ಐಎಎಸ್‌ ಅಧಿಕಾರಿಗಳನ್ನು ಸಹ ಹಾನಿಗೀಡಾದ ಜಿಲ್ಲೆಗಳಿಗೆ ವಿಶೇಷ ಕರ್ತವ್ಯಾಧಿಕಾರಿಗಳಾಗಿ ನಿಯೋಜಿಸಿ ರಾಜ್ಯ ಸರ್ಕಾರ ಶನಿವಾರ ಆದೇಶಿಸಿದೆ.

ಐಎಎಸ್‌ ಅಧಿಕಾರಿಗಳಾದ ಡಾ.ರಜನೀಶ್‌ ಗೋಯಲ್‌ ಅವರಿಗೆ ಬೆಳಗಾವಿ ಮತ್ತು ಬಾಗಲಕೋಟೆ, ಡಾ.ಇ.ವಿ.ರಮಣ ರೆಡ್ಡಿ ಅವರಿಗೆ ವಿಜಯಪುರ, ಕಲಬುರಗಿ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಮಹೇಂದ್ರ ಜೈನ್‌ ಅವರಿಗೆ ರಾಯಚೂರು, ಯಾದಗಿರಿ ಮತ್ತು ಡಾ. ಸಂದೀಪ್‌ ದವೆ ಅವರಿಗೆ ಉತ್ತರ ಕನ್ನಡ, ಉಡುಪಿ ಜಿಲ್ಲೆಯನ್ನು ಉಸ್ತುವಾರಿ ವಹಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ರಾಜೀವ್‌ ಚಾವ್ಲಾ ಹಾಗೂ ಹಾಸನ, ಕೊಡಗು ಜಿಲ್ಲೆಗೆ ಡಾ.ರಾಜ್‌ಕುಮಾರ್‌ ಖತ್ರಿ ಅವರನ್ನು ಉಸ್ತುವಾರಿಯಾಗಿ ನಿಯೋಜಿಸಲಾಗಿದೆ. ಈ ಅಧಿಕಾರಿಗಳು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಹಾರ ಕಾರ್ಯಗಳು ತ್ವರಿತವಾಗಿ ಪರಿಣಾಮಕಾರಿಯಾಗಿ ನಡೆಸಲು ಕ್ರಮ ವಹಿಸಲಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಶೇಷ ಕರ್ತವ್ಯಾಧಿಕಾರಿಗಳಾಗಿ ಬೆಳಗಾವಿ ಜಿಲ್ಲೆಗೆ ಈಶ್ವರ್‌ ಕುಮಾರ್‌ ಕಾಂಡು, ಕೃಷ್ಣಕುಮಾರ್‌, ಮಮತಾ ಕುಮಾರಿ, ಎಂ.ಜಿ.ಶಿವಣ್ಣ, ಎಸ್‌.ಎಚ್‌.ಸಹನಾ, ಶಶಿಧರ ಕುರೇರ, ಎಸ್‌.ಬಿ.ದೊಡಗೌಡರ್‌ ಅವರನ್ನು ನಿಯೋಜಿಸಲಾಗಿದೆ. ಬಾಗಲಕೋಟೆ ಜಿಲ್ಲೆಗೆ ಡಾ.ಗಿರೀಶ್‌ ದಿಲೀಪ್‌ ಬಾಡೋಲೆ, ಬಲರಾಮ ಲಮಾಣಿ, ಸಿದ್ರಾಮೇಶ್ವರ, ಪ್ರಶಾಂತ ಹನಗಂಡಿ, ರಾಯಪ್ಪ ಹುಣಸಗಿ ಅವರನ್ನು ನೇಮಕ ಮಾಡಲಾಗಿದೆ. ರಾಯಚೂರು ಜಿಲ್ಲೆಗೆ ನಾರಾಯಣ ರೆಡ್ಡಿ ಕನಕರೆಡ್ಡಿ, ಜಯಲಕ್ಷ್ಮೇ, ಕಲಬುರಗಿ ಜಿಲ್ಲೆಗೆ ಸೋಮಪ್ಪ ಕಡಕೋಳ, ಯಾದಗಿರಿ ಜಿಲ್ಲೆಗೆ ಪಾರ್ವತಿ, ರಾಮಚಂದ್ರ ಗಡೆದೆ, ವಿಜಯಪುರ ಜಿಲ್ಲೆಗೆ ಬಿನಯ್‌, ಸುರೇಖಾ, ಗದಗ ಜಿಲ್ಲೆಗೆ ಎನ್‌.ಸಿದ್ದೇಶ್ವರ್‌, ರಘು, ಹಾವೇರಿ ಜಿಲ್ಲೆಗೆ ನೇಹಾ ಜೈನ್‌ ಹಾಗೂ ಅದಾ ಫಾತಿಮಾ ಅವರನ್ನು ನಿಯೋಜನೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಗೆ ದಿಗ್ವಿಜಯ ಬೊಡ್ಕೆ, ಜಿ.ಡಿ.ಶೇಖರ್‌, ಆರ್‌.ಚಂದ್ರಯ್ಯ, ಯತೀಶ್‌ ಉಲ್ಲಾಳ್‌, ಮೈಸೂರು ಜಿಲ್ಲೆಗೆ ಮಮತಾದೇವಿ, ಮಂಜುನಾಥಸ್ವಾಮಿ, ಎಂ.ಆರ್‌.ರಾಜೇಶ್‌, ಹಾಸನ ಜಿಲ್ಲೆಗೆ ಶ್ರೀನಿವಾಸಗೌಡ, ಸಿ.ಆರ್‌.ಕಲ್ಪಶ್ರಿ, ಗಿರೀಶ್‌ ನಂದನ್‌, ಚಿಕ್ಕಮಗಳೂರು ಜಿಲ್ಲೆಗೆ ಮದನ್‌ ಮೋಹನ್‌, ಎ.ಆರ್‌.ಸೂರಜ್‌, ಕೊಡಗು ಜಿಲ್ಲೆಗೆ ಉಕೇಶ್‌ ಕುಮಾರ್‌, ಮೊಹಮದ್‌ ನಯೀಮ್‌ ಮೊಮಿನ್‌, ಗಂಗಪ್ಪ, ರೂಪಾಶ್ರೀ, ದಕ್ಷಿಣ ಕನ್ನಡ ಜಿಲ್ಲೆಗೆ ಜಿ.ಸಂತೋಷ್‌ ಕುಮಾರ್‌, ನಾಗರಾಜ್‌, ವಿದ್ಯಾಶ್ರೀ ಚಂದರಗಿ, ಉಡುಪಿ ಜಿಲ್ಲೆಗೆ ರಾಜು, ಉತ್ತರ ಕನ್ನಡ ಜಿಲ್ಲೆಗೆ ಅಜಿತ್‌, ವೀರಭದ್ರ ಹಂಚಿನಾಳ, ಪ್ರವಿಣ್‌ ಬಾಗೇವಾಡಿ, ರಾಮಪ್ಪ ಹಟ್ಟಿ, ಡಾ.ಎ.ಚನ್ನಪ್ಪ, ಸುಶೀಲಮ್ಮ, ಡಾ.ಎಚ್‌.ಆರ್‌.ಶಿವಕುಮಾರ್‌, ರವಿ ಎಂ. ತಿರ್ಲಾಪುರ ಅವರನ್ನು ನಿಯುಕ್ತಿಗೊಳಿಸಲಾಗಿದೆ.