ವೇದ ನಿಲಯಂನಲ್ಲಿ ಜಯಲಲಿತಾ ಅವರು ಸಾಕಿದ 17 ಅನಾಥ ಮಕ್ಕಳು ಇದ್ದಾರೆ. ‘ಜಯಾ ನಿವಾಸದ ಖಾಲಿ ಕೋಣೆಯೊಂದರಿಂದ ನಮಗೆ ಚೀರು ದನಿ ಕೇಳಿಸುತ್ತದೆ’ ಎಂದು ಹೇಳಿದ್ದಾರೆ.
ಚೆನ್ನೈ(ಮೇ.07): ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ನಿಧನರಾಗಿ 5 ತಿಂಗಳಾದರೂ, ಅವರ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡುತ್ತಲೇ ಇವೆ. ಇದೀಗ ಈ ಊಹಾಪೋಹಗಳಿಗೆ ಹೊಸ ಸೇರ್ಪಡೆಯಾಗಿದೆ. ಅದೇನೆಂದರೆ ಜಯಾ ಅವರ ಪೋಯೆಸ್ ಗಾರ್ಡನ್‌ನ ‘ವೇದ ನಿಲಯಂ’ನಲ್ಲಿ ರಾತ್ರಿ ವೇಳೆ ಯಾರೋ ಚೀರುತ್ತಿರುವುದು ಕೇಳಿಸುತ್ತಿದೆಯಂತೆ.ಇದರರ್ಥ ಜಯಾ ಅವರ ಆತ್ಮ ಇನ್ನೂ ವೇದ ನಿಲಯಂನಲ್ಲೇ ಸುತ್ತುತ್ತಿದೆ!
ವೇದ ನಿಲಯಂನಲ್ಲಿ ಜಯಲಲಿತಾ ಅವರು ಸಾಕಿದ 17 ಅನಾಥ ಮಕ್ಕಳು ಇದ್ದಾರೆ. ‘ಜಯಾ ನಿವಾಸದ ಖಾಲಿ ಕೋಣೆಯೊಂದರಿಂದ ನಮಗೆ ಚೀರು ದನಿ ಕೇಳಿಸುತ್ತದೆ’ ಎಂದು ಹೇಳಿದ್ದಾರೆ. ಇದೇ ವೇಳೆ, ಕೆಲಸದಾಳೊಬ್ಬರು ‘ಜಯಾ ಕೋಣೆಯ ಬಾಗಿಲು ತಂತಾನೇ ತೆರೆಯುವುದು, ಬಂದಾಗುವುದನ್ನು ನೋಡಿದ್ದೇನೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಮರೀನಾ ಬೀಚ್‌ನಲ್ಲಿರುವ ಜಯಾ ಸಮಾಗೆ ಭದ್ರತಾ ಡ್ಯೂಟಿ ಮೇಲೆ ನಿಯೋಜನೆಯಾದ ಪೊಲೀಸರು ಏಕಾಏಕಿ ಅಸ್ವಸ್ಥರಾಗುತ್ತಿದ್ದಾರೆ. ಈವೆರೆಗೆ 20 ಪೊಲೀಸರು ಅಸ್ವಸ್ಥರಾಗಿದ್ದು ಅವರನ್ನು ಬೇರೆ ಸ್ಥಳಕ್ಕೆ ನಿಯೋಜಿಸಲಾಗಿದೆ ಎಂಬ ಪುಕಾರುಗಳೂ ಹಬ್ಬಿವೆ. ಈ ಹಿಂದೆ ಜಯಾ ಸಮಾಧಿಯ ಒಳಗೆ ಅವರ ವಾಚ್‌ನಿಂದ ‘ಟಿಕ್.. ಟಿಕ್’ ಶಬ್ದ ಬರುತ್ತಿದೆ ಎಂಬ ವದಂತಿ ಹರಡಿದ್ದವು.
ಸುಳ್ಳು:
ಆದರೆ ಈ ಹೇಳಿಕೆಗಳನ್ನು ಕೆಲವರು ತಳ್ಳಿಹಾಕಿದ್ದಾರೆ. ‘ಬಂಗಲೆಯನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಶಶಿಕಲಾ ಕುಟುಂಬದವರು ಇಂಥ ಪುಕಾರು ಹಬ್ಬಿಸುತ್ತಿದ್ದಾರೆ. ಮನೆಯು ಸರ್ಕಾರದ ವಶಕ್ಕೆ ಹೋಗಿ ಎಲ್ಲಿ ಸ್ಮಾರಕ ಆಗಿಬಿಟ್ಟೀತು ಎಂಬ ಭಯದಿಂದ ಅವರು ಈ ವದಂತಿ ಸೃಷ್ಟಿಸುತ್ತಿದ್ದಾರೆ’ ಎಂದು ಆಪಾದಿಸಲಾಗುತ್ತಿದೆ. ಇನ್ನು ಪೊಲೀಸರು ಅಸ್ವಸ್ಥರಾದ ಬಗ್ಗೆಯೂ ಕೆಲವರು ಸ್ಪಷ್ಟನೆ ನೀಡಿದ್ದು, ‘ಮರೀನಾ ಬೀಚ್‌ನಲ್ಲಿ ಬೇಸಿಗೆ ಬಿಸಿಲು ಜೋರಾಗಿರುವ ಕಾರಣ ಸತತ ಕರ್ತವ್ಯದಲ್ಲಿವವರು ಅಸ್ವಸ್ಥರಾಗುವುದು ಸಹಜ’ ಎಂದಿದ್ದಾರೆ.
