ನವದೆಹಲಿ: ಕರ್ನಾಟಕ ಹೈಕೋರ್ಟ್‌ಗೆ ಐವರು ನ್ಯಾಯಾಧೀಶರ ನೇಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 

ಜಿಲ್ಲಾ ನ್ಯಾಯಾಧೀಶರಾದ ಅಶೋಕ ಗೋಳಪ್ಪ ನಿಜಗಣ್ಣವರ, ಹೇತೂರ್‌ ಸಂದೇಶ್‌ ಪುಟ್ಟಸ್ವಾಮಿ ಗೌಡ , ಕೃಷ್ಣನ್‌ ನಟರಾಜನ್‌, ಪ್ರಹ್ಲಾದ ರಾವ್‌ ಗೋವಿಂದರಾವ್‌ ಮುತಾಲಿಕ ಪಾಟೀಲ್‌ ಹಾಗೂ ಅಪ್ಪಾ ಸಾಹೇಬ ಶಾಂತಪ್ಪ ಬೆಳ್ಳುಂಕೆ ಅವರನ್ನು ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. 

ಈ ಐವರು ನ್ಯಾಯಾಧೀಶರ ನೇಮಕಕ್ಕೆ ನಿವೃತ್ತ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಕೊಲಿಜಿಯಂ 2018ರ ಆ.1ರಂದು ಶಿಫಾರಸು ಮಾಡಿತ್ತು.

ಇದೇ ವೇಳೆ, ಏಳು ಮಂದಿ ಹೆಚ್ಚುವರಿ ನ್ಯಾಯಾಧೀಶರಿಗೆ ಕರ್ನಾಟಕ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರನ್ನಾಗಿ ಬಡ್ತಿ ನೀಡುವ ಪ್ರಸ್ತಾವನೆಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 

ಕೆಂಪಯ್ಯ ಸೋಮಶೇಖರ್‌, ಕೆ.ಎಸ್‌. ಮುದ್ಗಲ್‌, ಶ್ರೀನಿವಾಸ್‌ ಎಚ್‌.ಕುಮಾರ್‌, ಜಾನ್‌ ಮೈಕೆಲ್‌ ಕುನ್ಹಾ, ಬಸವರಾಜ್‌ ಎ. ಪಾಟೀಲ್‌, ಎನ್‌.ಕೆ. ಸುಧೀಂದ್ರರಾವ್‌ ಮತ್ತು ಡಾ ಎಚ್‌.ಬಿ ಪ್ರಭಾಕರ್‌ ಶಾಸ್ತ್ರಿ ಅವರು ಕರ್ನಾಟಕ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಕಳೆದ ತಿಂಗಳು ಸುಪ್ರೀಂಕೋರ್ಟ್‌ ಕೊಲಿಜಿಯಂ ಇವರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು.