Asianet Suvarna News Asianet Suvarna News

ನೀಲಮಣಿಯ ಬಗ್ಗೆ ನಿಮಗೆ ಗೊತ್ತಿರದ 5 ಅಂಶಗಳಿವು

ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ಎಂಬ ಶ್ರೇಯಕ್ಕೂ ನೀಲಮಣಿ ರಾಜು ಪಾತ್ರರಾಗಿದ್ದಾರೆ. ನೀಲಮಣಿ ರಾಜು ಬಗ್ಗೆ ನಿಮಗೆ ಗೊತ್ತಿರದ 5 ಅಂಶಗಳು:

5 Interesting Facts about Neelamani Raju
  • Facebook
  • Twitter
  • Whatsapp

ಬೆಂಗಳೂರು(ಅ.31): ಸೇವಾ ಹಿರಿತನದ ಆಧಾರದ ಮೇಲೆ ಹಿರಿಯ ಐಪಿಎಸ್ ಅಧಿಕಾರಿ ಕರ್ನಾಟಕ ರಾಜ್ಯದ ನೂತನ ಡಿಜಿ-ಐಜಿಪಿಯಾಗಿ ನೇಮಕವಾಗಿದ್ದಾರೆ. ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ಎಂಬ ಶ್ರೇಯಕ್ಕೂ ನೀಲಮಣಿ ರಾಜು ಪಾತ್ರರಾಗಿದ್ದಾರೆ.

ನೀಲಮಣಿ ರಾಜು ಬಗ್ಗೆ ನಿಮಗೆ ಗೊತ್ತಿರದ 5 ಅಂಶಗಳು:

1. ನೀಲಮಣಿ ಜನವರಿ 17, 1960ರಲ್ಲಿ ಜನಿಸಿದ್ದು, ಉತ್ತರಾಖಂಡ್'ನ ಹರಿದ್ವಾರ ಜಿಲ್ಲೆಯ ರೂರ್ಕಿಯವರು.

2. ನೀಲಮಣಿ ಕೆಜಿಎಫ್'ನಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ ಕೋಲಾರ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

3. ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಜಂಟಿ ನಿರ್ದೇಶಕಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

4. ನೀಲಮಣಿ M.A, MBA, M.Phil ಪದವಿ ಪಡೆದಿದ್ದಾರೆ.

5. ನೀಲಮಣಿಯವರ ಪತಿ ಎನ್. ನರಸಿಂಹ ರಾಜು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮೂರು ವರ್ಷಗಳ ಕಾಲ ಪ್ರದಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ನಿವೃತ್ತಿಯ ಬಳಿಕ ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios