ಜೋರಾಗಿದೆ ಚುನಾವಣಾ ಅಬ್ಬರ; ಕಾಂಗ್ರೆಸ್ ಪರ 45 ಸ್ಟಾರ್ ಕ್ಯಾಂಪೇನರ್ಸ್’ನಿಂದ ಪ್ರಚಾರ

45 campaigners for Congress Campaign
Highlights

ಚುನಾವಣೆ  ಹತ್ತಿರವಾಗುತ್ತಿದ್ದಂತೆ  ಕಾಂಗ್ರೆಸ್ ಪ್ರಚಾರ ಬಿರುಸಾಗಿದೆ.  ಕಾಂಗ್ರೆಸ್ ಪರ 45 ಸ್ಟಾರ್ ಕ್ಯಾಂಪೇನರ್ಸ್ ಪ್ರಚಾರ ಮಾಡಲಿದ್ದಾರೆ.  ನಟ ಪ್ರಕಾಶ್ ರೈ ಕರೆಸಿ ಪ್ರಚಾರ ನಡೆಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ. 
ಮೋದಿ ವಿರುದ್ಧ ಹೇಳಿಕೆ ನೀಡುತ್ತಿದ್ದ ಪ್ರಕಾಶ್ ರೈ ಸೆಳೆಯಲು ಡಿ.ಕೆ ಶಿವಕುಮಾರ್ ಯತ್ನಿಸಿದ್ದಾರೆ.   ಪ್ರಕಾಶ್ ರೈ ಜೊತೆ ಮಾತುಕತೆ ನಡೆಸುವಂತೆ  ಡಿ.ಕೆ ಶಿವಕುಮಾರ್ ರಮ್ಯಾಗೆ ಹೇಳಿದ್ದಾರೆ.  

ಬೆಂಗಳೂರು (ಮಾ. 29): ಚುನಾವಣೆ  ಹತ್ತಿರವಾಗುತ್ತಿದ್ದಂತೆ  ಕಾಂಗ್ರೆಸ್ ಪ್ರಚಾರ ಬಿರುಸಾಗಿದೆ.  ಕಾಂಗ್ರೆಸ್ ಪರ 45 ಸ್ಟಾರ್ ಕ್ಯಾಂಪೇನರ್ಸ್ ಪ್ರಚಾರ ಮಾಡಲಿದ್ದಾರೆ.  ನಟ ಪ್ರಕಾಶ್ ರೈ ಕರೆಸಿ ಪ್ರಚಾರ ನಡೆಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ. 
ಮೋದಿ ವಿರುದ್ಧ ಹೇಳಿಕೆ ನೀಡುತ್ತಿದ್ದ ಪ್ರಕಾಶ್ ರೈ ಸೆಳೆಯಲು ಡಿ.ಕೆ ಶಿವಕುಮಾರ್ ಯತ್ನಿಸಿದ್ದಾರೆ.   ಪ್ರಕಾಶ್ ರೈ ಜೊತೆ ಮಾತುಕತೆ ನಡೆಸುವಂತೆ  ಡಿ.ಕೆ ಶಿವಕುಮಾರ್ ರಮ್ಯಾಗೆ ಹೇಳಿದ್ದಾರೆ.  

ಪ್ರಕಾಶ್ ರೈ ಜೊತೆ ರಾಕ್ ಲೈನ್ ವೆಂಕಟೇಶ್ ಅವರನ್ನೂ ಕಾಂಗ್ರೆಸ್ ಪರ ಪ್ರಚಾರಕ್ಕೆ ಕರೆತರಲು ಕಾಂಗ್ರೆಸ್ ಪ್ಲಾನ್ ಮಾಡಿದೆ.  ರಾಕ್ ಲೈನ್ ವೆಂಕಟೇಶ್ ಅವರನ್ನ ಕಾಂಗ್ರೆಸ್ ಗೆ ಕರೆತರುವ ಜವಾದ್ದಾರಿಯನ್ನ ಮುನಿರತ್ನ ಅವರಿಗೆ ವಹಿಸಲಾಗಿದೆ. 
ಸ್ಟಾರ್ ಕ್ಯಾಂಪೇನರ್ ಲಿಸ್ಟ್’ನಲ್ಲಿ ಸಾದುಕೊಕಿಲಾ, ಅಂಬರೀಷ್, ರಮ್ಯಾ ಇದ್ದಾರೆ.  ಶಶಿಕುಮಾರ್, ಭಾವನಾ, ಭವ್ಯ, ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್  ಸ್ಟಾರ್ ಕ್ಯಾಂಪೇನರ್ಸ್ ಲಿಸ್ಟ್’ನಲ್ಲಿದ್ದಾರೆ.  ಸಿಎಂ ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ, ಖರ್ಗೆ, ಪರಮೇಶ್ವರ್, ಡಿಕೆ ಶಿವಕುಮಾರ್ ಅವರಿಗೆ ಸ್ಟಾರ್ ಕ್ಯಾಂಪೇನರ್ಸ್ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 
 

loader