ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯಿಂದ ಪ್ರತಿದಾಳಿ| ದಾಳಿ ನಡೆದ 43 ದಿನ ಬಳಿಕ ಬಾಲಾಕೋಟ್‌ಗೆ ಪತ್ರಕರ್ತರ ಒಯ್ದ ಪಾಕ್
ಇಸ್ಲಾಮಾಬಾದ್[ಏ.11]: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಗಡಿ ನುಗ್ಗಿ ದಾಳಿ ಮಾಡಿದ 43 ದಿನಗಳ ಬಳಿಕ ಬಾಲಾಕೋಟ್ ಪ್ರದೇಶಕ್ಕೆ ಪಾಕಿಸ್ತಾನ ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ವಿದೇಶಾಂಗ ರಾಯಭಾರಿಗಳನ್ನು ಕರೆದೊಯ್ದಿದೆ. ಈ ಮೂಲಕ ಬಾಲಾಕೋಟ್ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದೆ ಎಂಬುದು ಆಧಾರರಹಿತ ಎಂದು ತೋರಿಸುವ ಯತ್ನ ಮಾಡಿದೆ.
ಆದರೆ ಇಷ್ಟೊಂದು ದಿನಗಳ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಬಿಬಿಸಿ ಉರ್ದು ಪ್ರಕಾರ, ಅಂತಾರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ಮತ್ತು ವಿದೇಶಾಂಗ ರಾಯಭಾರಿಗಳು ಇಸ್ಲಾಮಾಬಾದ್‌ನಿಂದ ಬಾಲಾಕೋಟ್‌ನಲ್ಲಿರುವ ಜಬ್ಬಾಗೆ ತೆರಳಿದರು. ಆ ನಂತರ ಅವರು ಒಂದುವರೆ ತಾಸುಗಳ ಕಾಲ ನಡೆದು, ಹಸಿರು ಮರಗಳು ಸುತ್ತುವರಿದಿರುವ ಗುಡ್ಡದ ಮೇಲೆ ಮದರಸಾ ಇರುವ ಪ್ರದೇಶಕ್ಕೆ ತೆರಳಿದ್ದಾರೆ.
ಈ ವೇಳೆ ಈ ಮದರಸಾದಲ್ಲಿ 12-13 ವರ್ಷದ 150 ವಿದ್ಯಾರ್ಥಿಗಳಿದ್ದು, ಅವರಿಗೆ ಕುರಾನ್ ಅಂಶಗಳನ್ನು ಬೋಧಿಸಲಾಗುತ್ತಿದೆ ಎಂದು ಮಾಧ್ಯಮಗಳು ಹೇಳಿವೆ. ಇದೊಂದು ಹಳೆಯ ಮದರಸಾವಾಗಿರುವುದರಿಂದ ಹೆಚ್ಚಿನ ಮೂಲಭೂತ ಸೌಕರ್ಯಗಳಿಲ್ಲ ಎಂದು ಹೇಳಲಾಗಿದೆ.
