. ಅವಹೇಳಕಾರಿ ಚಿತ್ರಗಳನ್ನು ಪ್ರಕಟಿಸಿರುವ ಬಗ್ಗೆ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿದ್ಯಾರ್ಥಿ ದಳ ದೂರನ್ನು ದಾಖಲಿಸಿತ್ತು.

ವಾರಣಾಸಿ(ಮಾ.21): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಅವಹೇಳನಕಾರಿ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪಸರಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಧಿತರು ವಾರಣಾಸಿ, ಗಾಜಿಯಾಪುರ,ಘಾಜಿಪುರ್,ಸೋನ್'ಭದ್ರ ಹಾಗೂ ಬರೇಲಿ ಜಿಲ್ಲೆಯವರಾಗಿದ್ದು, ಪೋಸ್ಟ್ ಮಾಡಿದ 24 ಗಂಟೆಗಳಲ್ಲಿಯೇ ಬಂಧಿಸಲಾಗಿದೆ. ಅವಹೇಳಕಾರಿ ಚಿತ್ರಗಳನ್ನು ಪ್ರಕಟಿಸಿರುವ ಬಗ್ಗೆಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿದ್ಯಾರ್ಥಿ ದಳ ದೂರನ್ನು ದಾಖಲಿಸಿತ್ತು. ಬಂಧಿತ ನಾಲ್ವರು ಅವಹೇಳನಕಾರಿ ಚಿತ್ರಗಳನ್ನು ವ್ಯಾಟ್ಸ್'ಪ್' ಹಾಗೂ ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿದ್ದರು.