ಬೆಂಗಳೂರು (ಸೆ. 05): ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ 2019 -20 ನೇ ಸಾಲಿನ ರಾಜ್ಯಮಟ್ಟದ ‘ಉತ್ತಮ ಶಿಕ್ಷಕರ ಪ್ರಶಸ್ತಿ’ ಪ್ರಕಟಿಸಿದೆ.

ಪ್ರಾಥಮಿಕ ಶಾಲೆಯ 20 ಹಾಗೂ ಪ್ರೌಢಶಾಲೆಯ 11 ಶಿಕ್ಷಕರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರೆಲ್ಲರಿಗೂ ‘ಮಾತೆ ಸಾವಿತ್ರಿಬಾಯಿ ಪುಲೆ’ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಆಯ್ಕೆಯಾಗಿರುವ ಶಿಕ್ಷಕರಿಗೆ ಗುರುವಾರ ಬೆಂಗಳೂರಿನ ವಸಂತನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಗುರಿ ತೋರಿದ ಗುರುವಿಗೆ ನಮಸ್ಕಾರ!

ಪ್ರಶಸ್ತಿ ಪುರಸ್ಕೃತರು

 ಪ್ರಾಥಮಿಕ ಶಾಲಾ ವಿಭಾಗ: ಸಹ ಶಿಕ್ಷಕಿ, ಆಶಾ ಹೆಗಡೆ- ಸಹಿಪ್ರಾ ಶಾಲೆ, ಮೇಳಕುಂದ, ಕಲಬುರಗಿ ಜಿಲ್ಲೆ, ನಾಗಣ್ಣ- ಸಹ ಶಿಕ್ಷಕ, ಸಹಿಪ್ರಾ ಶಾಲೆ ಕುಂಬಾರಕೊಪ್ಪಲು, ಮೈಸೂರು, ಸಾವಿತ್ರಮ್ಮ- ಮುಖ್ಯ ಶಿಕ್ಷಕರು, ಸಹಿಪ್ರಾ ಶಾಲೆ, ಸಂಜೀವಿನಿ ನಗರ, ಬೆಂಗಳೂರು ಉತ್ತರ, ಸಂಶಿಯಾ- ಸಹ ಶಿಕ್ಷಕಿ, ಸಹಿಪ್ರಾ ಶಾಲೆ ಹೂಡ್ಲಮನೆ, ಸಿದ್ದಾಪುರ ತಾ., ಶಿರಸಿ, ಪದ್ಮ ಡಿ.- ಮುಖ್ಯ ಶಿಕ್ಷಕರು, ಸಹಿಪ್ರಾ ಶಾಲೆ ಅಲೆಟ್ಟಿ, ಸುಳ್ಯ, ದಕ್ಷಿಣ ಕನ್ನಡ, ಸೋಮಲಿಂಗಪ್ಪ- ಸಹ ಶಿಕ್ಷಕ, ಸಹಿಪ್ರಾ ಶಾಲೆ ಬೆಳವಡಿ, ಬೆಳಗಾವಿ, ಲಿಂಗರಾಜು- ಮುಖ್ಯ ಶಿಕ್ಷಕರು, ಸಹಿಪ್ರಾ ಶಾಲೆ ಬಿ. ಗೌಡಗೆರೆ, ಮಂಡ್ಯ, ಉಮಾದೇವಿ ಎಲ್.ಎನ್.- ಸಹ ಶಿಕ್ಷಕಿ, ಸಹಿಪ್ರಾ ಶಾಲೆ ತಿಂಡ್ಲು, ಆನೇಕಲ್, ಬೆಂಗಳೂರು ದಕ್ಷಿಣ, ರತ್ನಕುಮಾರಿ ಎಸ್.- ಸಹ ಶಿಕ್ಷಕಿ, ಸಹಿಪ್ರಾ ಶಾಲೆ ಸಮಟಗಾರು, ಹೊಸನಗರ, ಶಿವಮೊಗ್ಗ, ನಿರ್ಮಲ ರಾಮಚಂದ್ರ ಪತ್ತಾರ- ಸಹ ಶಿಕ್ಷಕಿ, ಸಕಿಪ್ರಾ
ಶಾಲೆ ಶಿರಗುಪ್ಪಿ,

ಶಿಕ್ಷಕರಿಗೆ ಪತ್ರ ಬರೆದು ಶಿಕ್ಷಣ ಸಚಿವರ ಶುಭಾಶಯ

ಬಾಗಲಕೋಟೆ, ಬಿ.ಉಷಾ- ಸಹ ಶಿಕ್ಷಕಿ, ಸಹಿಪ್ರಾ ಶಾಲೆ ಬಿ. ಕ್ಯಾಂಪ್, ದಾವಣಗೆರೆ ದಕ್ಷಿಣ, ಮಲ್ಲಿಕಾರ್ಜುನ ಶಿವಲಿಂಗಪ್ಪ ಭೂಸಗೊಂಡ- ಸಹ ಶಿಕ್ಷಕಿ, ಸಕಮಾಪ್ರಾ ಶಾಲೆ ತಿಕೋಟ, ವಿಜಯಪುರ, ಗೀತಾ ಕೆ.ಎಚ್- ಸಹ ಶಿಕ್ಷಕಿ, ಸಹಿಪ್ರಾ ಶಾಲೆ ಯಲಗುಡಿಗೆ ಮಾಚಗೊಂಡನಹಳ್ಳಿ, ಚಿಕ್ಕಮಗಳೂರು, ನಾರಾಯಣ- ದೈಹಿಕ ಶಿಕ್ಷಕರು, ಸಹಿಪ್ರಾ ಶಾಲೆ ಸಿದ್ಧಯ್ಯನಪುರ, ಚಾಮರಾಜನಗರ, ಉಮೇಶ- ದೈಹಿಕ ಶಿಕ್ಷಕರು, ಸಮಾಹಿಪ್ರಾ ಶಾಲೆ ಬಜಗೋಳಿ, ಕಾರ್ಕಳ, ಉಡುಪಿ, ಮಲ್ಲೇಶಪ್ಪ ಅಡ್ಡೇದಾರ- ಮುಖ್ಯ ಶಿಕ್ಷಕರು, ಸಹಿಪ್ರಾ ಶಾಲೆ ವಡ್ಡರಹಟ್ಟಿ ಕ್ಯಾಂಪ್, ಗಂಗಾವತಿ, ಕೊಪ್ಪಳ, ಜಯಸಿಂಗ್ ಅಂಬುಲಾಲ ಠಾಕೂರ್- ಸಹ ಶಿಕ್ಷಕ, ಸಹಿಪ್ರಾ ಶಾಲೆ ಎಕಲಾರ, ಔರಾದ್, ಬೀದರ್, ಕೆ. ರಮೇಶ್- ಸಹ ಶಿಕ್ಷಕ, ಸಹಿಪ್ರಾ ಶಾಲೆ ಚಿಲ್ಲಪ್ಪನಹಳ್ಳಿ, ಕೋಲಾರ, ಭೀಮಯ್ಯ- ಮುಖ್ಯ ಶಿಕ್ಷಕರು, ಸಹಿಪ್ರಾ ಶಾಲೆ ಎಂ.ಟಿ.ಪಲ್ಲಿ, ಯಾದಗಿರಿ, ರಾಜನಗೌಡ ಪತ್ತಾರ- ಮುಖ್ಯಶಿಕ್ಷಕರು, ಸಹಿಪ್ರಾ ಶಾಲೆ ಕೆಸರಟ್ಟಿ,ಲಿಂಗಸುಗೂರು, ರಾಯಚೂರು.

ಸಮಾಜ ಮುಖಿ ಕಾರ್ಯಕ್ಕೆ ಸಂಬಳ ಮೀಸಲಿಟ್ಟ ಶಿಕ್ಷಕ

ಪ್ರೌಢಶಾಲಾ ವಿಭಾಗ:

ದಾನಮ್ಮ ಚ. ಝಳಕಿ- ಸಹ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ವಂಟಮೂರಿ ಕಾಲೋನಿ, ಬೆಳಗಾವಿ, ಕೃಷ್ಣಮೂರ್ತಿ ಎನ್.- ವಿಶೇಷ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಕ್ಯಾಲಕೊಂಡ, ಶಿಗ್ಗಾಂವಿ, ಹಾವೇರಿ, ಶೇಕ್ ಆದಂ ಸಾಹೇಬ್- ಸಹ ಶಿಕ್ಷಕ, ಸರ್ಕಾರಿ ಪಿಯು ಕಾಲೇಜು, ಕಾವಳ ಪಡೂರು, ಬಂಟ್ವಾಳ, ದಕ್ಷಿಣ ಕನ್ನಡ, ಹನುಮಪ್ಪ ಗೋವಿಂದಪ್ಪ ಹುದ್ದಾರ- ಸಹ ಶಿಕ್ಷಕ, ವಿದ್ಯಾವರ್ಧಕ ಸಂಘದ ಮಾಧ್ಯಮಿಕ ಶಾಲೆ, ಬಾದಾಮಿ, ಬಾಗಲಕೋಟೆ, ಬಿ.ಆರ್. ರಾಜಶೇಖರ್- ಮುಖ್ಯ ಶಿಕ್ಷಕರು, ಸಿದ್ಧಗಂಗಾ ಪ್ರೌಢಶಾಲೆ ಜಂಗಮಮಠ, ಶಿವನಗರ, ಬೆಂಗಳೂರು ಉತ್ತರ, ಮಂಜಪ್ಪ ವಿ. ಅಡಿವೇರ- ಮುಖ್ಯ ಶಿಕ್ಷಕರು, ಸರ್ಕಾರಿ ಉರ್ದು ಪ್ರೌಢಶಾಲೆ, ಹುಬ್ಬಳ್ಳಿ, ಧಾರವಾಡ, ಕವಿತಾ ದಿಗ್ಗಾವಿ- ಎಂಎನ್‌ಎಂ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಗಂಗಾವತಿ, ಕೊಪ್ಪಳ, ಆರ್. ನಾರಾಯಣ ಸ್ವಾಮಿ- ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,

ಬಾಶೆಟ್ಟಿಹಳ್ಳಿ, ದೊಡ್ಡಬಳ್ಳಾಪುರ, ಬೆಂ.ಗ್ರಾ., ಶರಣಪ್ಪ ಕರಿಶೆಟ್ಟಿ- ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕೊಳಬಾಳ, ಮಸ್ಕಿ, ರಾಯಚೂರು, ಎಚ್.ಆರ್. ರೇಣುಕಯ್ಯ- ಸಹ ಶಿಕ್ಷಕರು, ಸರ್ಕಾರಿ
ಪ್ರೌಢಶಾಲೆ, ಗೂಳೇ ಹರವಿ, ತುಮಕೂರು, ಚನ್ನೇಗೌಡ- ಸಹ ಶಿಕ್ಷಕರು, ಗಂಗಾಧರೇಶ್ವರ ಬಾಲಕಿಯರ ಪ್ರೌಢಶಾಲೆ, ಮಾಗಡಿ, ರಾಮನಗರ.