ಬಾರ್ ಒಂದಕ್ಕೆ ಹೋದ ಜೇಮಿ, ಕಂಠ ಪೂರ್ತಿ ಕುಡಿದ. ಇದೇ ಕುಡಿದ ಮತ್ತಿನಲ್ಲಿ ತೂರಾಡುತ್ತ ತನ್ನ ಕೈಯನ್ನು ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬನ ಪೃಷ್ಠದ ಮೇಲೆ ಇರಿಸಿ

ದುಬೈನಲ್ಲಿ ಎಲ್ಲವೂ ಸ್ಟ್ರಿಕ್ಟ್. ಅಲ್ಲಿ ಶಿಸ್ತಿಗೆ ಬಲು ಪ್ರಾಮುಖ್ಯತೆ. ಸ್ವಲ್ಪ ಏಮಾರಿದರೂ ಜೈಲೇ ಗತಿ. ಅಂತೆಯೇ ಸ್ಟರ್ಲಿಂಗ್‌ನ ಜೇಮಿ ಹ್ಯಾರನ್ ಎಂಬ ಪಾಶ್ಚಾತ್ಯ ಪ್ರವಾಸಿಗ ದುಬೈಗೆ ಮೋಜಿಗೆಂದು ಇತ್ತೀಚೆಗೆ ಪ್ರವಾಸ ಕೈಗೊಂಡಿದ್ದ. ಆದರೆ ಅದು ಎಡವಟ್ಟಾಗಿ ಈಗ 3 ತಿಂಗಳು ಜೈಲು ವಾಸ ಅನುಭವಿಸುತ್ತಿದ್ದಾನೆ.

ಆಗಿದ್ದಿಷ್ಟೇ. ಬಾರ್ ಒಂದಕ್ಕೆ ಹೋದ ಜೇಮಿ, ಕಂಠ ಪೂರ್ತಿ ಕುಡಿದ. ಇದೇ ಕುಡಿದ ಮತ್ತಿನಲ್ಲಿ ತೂರಾಡುತ್ತ ತನ್ನ ಕೈಯನ್ನು ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬನ ಪೃಷ್ಠದ ಮೇಲೆ ಇರಿಸಿದ. ಇದರಿಂದ ಕೋಪಗೊಂಡ ಆ ವ್ಯಕ್ತಿ ದೂರು ನೀಡಿದ. ಇದರ ವಿಚಾರಣೆ ನಡೆಸಿದ ಕೋರ್ಟ್, ಜೇಮಿಗೆ ಈಗ ವ್ಯಕ್ತಿಯೊಬ್ಬನ ಪೃಷ್ಠ ಮುಟ್ಟಿದ್ದಕ್ಕೆ 3 ತಿಂಗಳು ಜೈಲು ಶಿಕ್ಷೆ ವಿಧಿಸಿದೆ!