ಫೇಸ್‌ಬುಕ್ ಖಾತೆಗಳ ಮಾಹಿತಿ ಆಗಾಗ ಕಳವು ಆಗುತ್ತಲೇ ಇದೆ. ಮೊನ್ನೆ ತಾನೇ 5 ಕೋಟಿ ಖಾತೆಗಳ ಮಾಹಿತಿ ಕಳವಾಗಿತ್ತು. ಇದೀಗ ಮತ್ತೆ ಮೂರು ಕೋಟಿ ಖಾತೆಗಳ ಮಾಹಿತಿ ಕಳವಾಗಿದೆ.

ನ್ಯೂಯಾರ್ಕ್: ಇತ್ತೀಚೆಗೆ ನಡೆದ ಹ್ಯಾಕರ್‌ಗಳ ದಾಳಿ ವೇಳೆ 2.9 ಕೋಟಿ ಜನರ ಮಾಹಿತಿಯನ್ನು ಕದಿಯಲಾಗಿದೆ ಎಂದು ಫೇಸ್‌ಬುಕ್‌ ಖಚಿತಪಡಿಸಿದೆ.

ಈ 2.9 ಕೋಟಿ ಫೇಸ್‌ಬುಕ್‌ ಬಳಕೆದಾರರ ಪೈಕಿ, 1.5 ಕೋಟಿ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಲಭ್ಯವಾಗುವ ಮೊಬೈಲ್‌ ಸಂಖ್ಯೆ, ಇ-ಮೇಲ್‌ ಅಥವಾ ಎರಡೂ ಮತ್ತು ಹೆಸರುಗಳನ್ನು ಹ್ಯಾಕರ್‌ಗಳು ಪಡೆದಿದ್ದಾರೆ. ಅಲ್ಲದೆ, ಉಳಿದ 1.4 ಕೋಟಿ ಮಂದಿಯ ಯೂಸರ್‌ನೇಮ್‌(ಬಳಕೆದಾರರ ಹೆಸರು), ಲಿಂಗ, ಭಾಷೆ, ಧರ್ಮ, ಹುಟ್ಟೂರು, ವಾಸವಾಗಿರುವ ಸ್ಥಳ, ಜನ್ಮ ದಿನಾಂಕ, ಫೇಸ್‌ಬುಕ್‌ ಬಳಕೆಗೆ ಬಳಸುವ ಮೊಬೈಲ್‌, ಶಿಕ್ಷಣ, ಕೆಲಸ ಹಾಗೂ ಅವರು ಶೋಧ ನಡೆಸಿದ 10 ಪ್ರದೇಶಗಳ ಬಗ್ಗೆ ವಿವರವನ್ನು ಹ್ಯಾಕರ್‌ಗಳು ತಮ್ಮದಾಗಿಸಿಕೊಂಡಿದ್ದಾರೆ ಎಂದು ಫೇಸ್‌ಬುಕ್‌ ಹೇಳಿದೆ.

ಝುಕರ್‌ಬರ್ಗ್ ಖಾತೆ ಡಿಲೀಟ್

ಫೇಸ್‌ಬುಕ್‌ನ 5 ಕೋಟಿ ಬಳಕೆದಾರರ ಖಾತೆಗಳನ್ನು ಪ್ರವೇಶಿಸಲು ಅವಕಾಶ ಕಲ್ಪಿಸುವ ಡಿಜಿಟಲ್‌ ಲಾಗಿನ್‌ ಕೋಡ್‌ಗಳನ್ನು ಹ್ಯಾಕರ್‌ಗಳು ದೋಚಿದ್ದಾರೆ ಎಂದು ಸೆಪ್ಟೆಂಬರ್‌ ಕೊನೇ ವಾರದಲ್ಲಿ ಫೇಸ್‌ಬುಕ್‌ ಹೇಳಿತ್ತು.