ನವ​ದೆ​ಹ​ಲಿ[ಜು.31]: ದೇಶ​ದಲ್ಲಿ ಒಟ್ಟು 5,344 ದೊಡ್ಡ ಜಲಾ​ಶ​ಯ​ಗ​ಳಿವೆ. ಅವು​ಗ​ಳಲ್ಲಿ 293ಕ್ಕೂ ಹೆಚ್ಚು ಜಲಾ​ಶ​ಯ​ಗಳು 100 ವರ್ಷಗಳಷ್ಟು ಹಳೆ​ಯ​ದ್ದಾ​ಗಿವೆ. ದೇಶಾ​ದ್ಯಂತ ಇರುವ ಜಲಾ​ಶ​ಯ​ಗಳ ಮೇಲ್ವಿ​ಚಾ​ರ​ಣೆ​ಗಾಗಿ ರಾಷ್ಟ್ರೀಯ ಜಲಾ​ಶಯ ಸುರ​ಕ್ಷತೆ ಪ್ರಾಧಿ​ಕಾರ ರಚಿ​ಸುವ ಅಗ​ತ್ಯ​ವಿದೆ ಎಂದು ಕೇಂದ್ರ ಸರ್ಕಾರ ಸೋಮ​ವಾರ ಲೋಕ​ಸ​ಭೆಗೆ ಮಾಹಿತಿ ನೀಡಿ​ದೆ.

ಈ ಪ್ರಾಧಿ​ಕಾ​ರ​ದಿಂದ ಡ್ಯಾಂಗಳ ಸಮ​ರ್ಪಕ ಮೇಲ್ವಿ​ಚಾ​ರಣೆ, ನಿರ್ವ​ಹಣೆ, ತಪಾ​ಸಣೆ, ಸಮಸ್ಯೆ ಏರ್ಪ​ಟ್ಟಲ್ಲಿ ಅವು​ಗಳ ನಿವಾ​ರಣೆ ಹಾಗೂ ಅಂತಾ​ರಾಜ್ಯ ವಿವಾದ ಬಗೆ​ಹ​ರಿ​ಸಲು ಸುಲ​ಭ​ವಾ​ಗ​ಲಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾ​ವತ್‌ ತಿಳಿ​ಸಿ​ದ್ದಾರೆ.

ಇನ್ನು 1,041 ಜಲಾ​ಶ​ಯ​ಗಳ ಪೈಕಿ ಶೇ.20ರಷ್ಟುಡ್ಯಾಂಗಳು 50ರಿಂದ 100 ವರ್ಷ​ಗಳ ಒಳಗೆ ನಿರ್ಮಾ​ಣ​ವಾ​ಗಿವೆ. ಶೇ.92ರಷ್ಟುಜಲಾ​ಶ​ಯ​ಗಳು ಅಂತಾ​ರಾಜ್ಯ ನದಿಗಳಿಗೆ ಸಂಬಂಧಿಸಿದ್ದು ಎಂದ​ರು.