ನವದೆಹಲಿ[ಜ.02]  ಎಐಎಡಿಎಂಕೆ ಸದಸ್ಯರ ಅತಿರೇಕದ ವರ್ತನೆಗೆ ಬೇಸತ್ತ ಸ್ಪೀಕರ್ ಸುಮಿತ್ರಾ ಮಹಾಜನ್  26 ಸಂಸದರನ್ನು ಅಮಾನತು ಮಾಡಿದ್ದಾರೆ. 

ಮೇಕೆದಾಟು ಕಾಮಗಾರಿ ಕಾರ್ಯ ಯೋಜನೆಯ ವರದಿಯನ್ನು ಸಿದ್ಧಪಡಿಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದಕ್ಕೆ ತಮಿಳುನಾಡು ಸಂಸದರು ವಿರೋಧ ವ್ಯಕ್ತಪಡಿಸಿ ಗಲಾಟೆಗೆ ಇಳಿದರು. ಇನ್ನು 5 ದಿನದ ಕಲಾಪಕ್ಕೆ ಈ ಅಮಾನತುಗೊಂಡ ಸದಸ್ಯರು ಹಾಜರಾಗುವಂತಿಲ್ಲ.

ಮೇಕೆದಾಟು ಡ್ಯಾಂ ನಿರ್ಮಿಸಿದರೆ ಏನೇನು ಮುಳುಗತ್ತೆ?

ವ್ಯಯವಾಗುತ್ತಿರುವ ನೀರು ಬಳಸಿಕೊಳ್ಳುವುದು ಮತ್ತು ಬೆಂಗಳೂರಿಗೆ ಕುಡಿಯುವ ನೀರು ತರುವ ಉದ್ದೇಶಿತ ಯೋಜನೆಗೆ ದಶಕಗಳ ಇತಿಹಾಸವಿದೆ. ಕೇಂದ್ರ ಸರಕಾರ ಈ ಬಗ್ಗೆ ವರದಿ ಸಿದ್ಧಮಾಡಿ ಎಂದು ಹೇಳಿರುವುದಕ್ಕೆ ತಮಿಳುನಾಡು ಕ್ಯಾತೆ ತೆಗೆದಿದೆ.