2018ನೇ ಪದ್ಮ ಪ್ರಶಸ್ತಿಗಳು ಪ್ರಕಟ: 15 ಸಾವಿರ ಉಚಿತ ಹೆರಿಗೆ ಮಾಡಿಸಿದ್ದ ಕನ್ನಡತಿ ನರಸಮ್ಮಗೆ ಪದ್ಮಶ್ರೀ

First Published 25, Jan 2018, 8:46 PM IST
2018 Padma Award announced
Highlights

ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಿಗೆ ಸಂಗೀತ ನೀಡಿರುವ ಸಂಗೀತ ರತ್ನ ಎಂದೇ ಖ್ಯಾತಿಗಳಿಸಿರುವ ಇಳಯರಾಜ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.

ನವದೆಹಲಿ(ಜ.25):  ಈ ವರ್ಷದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು ತಮ್ಮ ಜೀವಮಾನದಲ್ಲಿ 15 ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆ ಮಾಡಿಸಿರುವ ತುಮಕೂರಿನ ಪಾವಗಡದ ಸೂಲಗಿತ್ತಿ ನರಸಮ್ಮಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಇನ್ನುಳಿದಂತೆ  ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಿಗೆ ಸಂಗೀತ ನೀಡಿರುವ ಸಂಗೀತ ರತ್ನ ಎಂದೇ ಖ್ಯಾತಿಗಳಿಸಿರುವ ಇಳಯರಾಜ ಅವರಿಗೆ ಪದ್ಮಭೂಷಣ ಪ್ರಶಸ್ತಿ ಗೌರವಿಸಲಾಗಿದೆ.

ಅರವಿಂದ ಗುಪ್ತ - ವಿಜ್ಞಾನ ಕ್ಷೇತ್ರ,ಎಸ್​. ಬಿಸ್ವಾಸ್​ - ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಭಜ್ಜು ಶ್ಯಾಮ್ - ಗೊಂಡ ಕಲಾವಿದ, ಲಕ್ಷ್ಮಿ ಕುಟ್ಟಿ - ಗಿಡಮೂಲಿಕೆ ಔಷಧ ಕ್ಷೇತ್ರ, ಎಂ.ಆರ್. ರಾಜಗೋಪಾಲ್​ - ವೈದ್ಯಕೀಯ ಕ್ಷೇತ್ರ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

loader