ಸೆ.10ರ ಸುಮಾರಿಗೆ ನಡೆದ ಭಾರೀ ಶಕ್ತಿಶಾಲಿ ಬಾಂಬ್ ಪರೀಕ್ಷೆಯಿಂದಾಗಿ ಪರೀಕ್ಷಾ ಸ್ಥಳದಲ್ಲಿ ಸುರಂಗವೊಂದು ಕುಸಿದುಬಿದ್ದು 100 ಜನ ಸಾವನ್ನಪ್ಪಿದ್ದರು.

ಟೋಕಿಯೊ(ಅ.31): ಕಳೆದ ತಿಂಗಳು ಉತ್ತರ ಕೊರಿಯಾ ನಡೆಸಿದ್ದ ಹೈಡ್ರೋಜನ್ ಬಾಂಬ್ ಪರೀಕ್ಷೆ ವೇಳೆ, ಪರೀಕ್ಷಾ ಸ್ಥಳದ ಬಳಿಯ ಸುರಂಗ ಕುಸಿದು 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಜಪಾನ್‌ನ ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಸೆ.10ರ ಸುಮಾರಿಗೆ ನಡೆದ ಭಾರೀ ಶಕ್ತಿಶಾಲಿ ಬಾಂಬ್ ಪರೀಕ್ಷೆಯಿಂದಾಗಿ ಪರೀಕ್ಷಾ ಸ್ಥಳದಲ್ಲಿ ಸುರಂಗವೊಂದು ಕುಸಿದುಬಿದ್ದು 100 ಜನ ಸಾವನ್ನಪ್ಪಿದ್ದರು. ಇವರನ್ನು ರಕ್ಷಿಸಲು ನಡೆದ ಕಾರ್ಯಾಚರಣೆ ವೇಳೆ ಮತ್ತೊಮ್ಮೆ ಸುರಂಗ ಕುಸಿದಿದ್ದು, ಆ ವೇಳೆ ಮತ್ತೆ 100 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 200 ದಾಟಿರಬಹುದು ಎಂದು ಜಪಾನ್‌ನ ಆಶಿ ಟೀವಿ ಚಾನೆಲ್ ವರದಿ ಮಾಡಿದೆ.