ಬೆಂಗಳೂರು(ಮೇ. 30) ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿ ಹೇಳುವುದಾದರೆ ತಮಿಳುನಾಡಿನ ಎಐಎಡಿಎಂಕೆ ಗೆ ಅಂಥ ಹೇಳಿಕೊಳ್ಳುವಂಥ ಸಾಧನೆ ಮಾಡಿದ ತೃಪ್ತಿ ಏನಿಲ್ಲ. ಆದರೂ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಖಾತ್ರಿಯಾಗಿದೆ.

ತಮಿಳುನಾಡು ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರ ಪುತ್ರ ಒಪಿ ರವೀಂದ್ರನಾಥ್ ಕುಮಾರ್ ಏಕೈಕ ಎಂಪಿಯಾಗಿ ಎನ್ ಡಿಎ ಒಕ್ಕೂಟದಿಂದ ಗೆದ್ದುಬಂದಿದ್ದಾರೆ. 

ಮೋದಿ ಪ್ರಮಾಣಕ್ಕೆ ಬಾಲಿವುಡ್ ದಂಡು 

ತಮಿಳುನಾಡಿನ ಥೇನಿ ಕ್ಷೇತ್ರದಿಂದ ಸ್ಫರ್ಧೆ ಮಾಡಿ 53000 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಎಐಎಡಿಎಂಕೆ ರಾಜ್ಯಸಭಾ ಸದಸ್ಯ ಆರ್ ವೈತಿಲಿಂಗಮ್ ಮತ್ತು ರವೀಂದ್ರನಾಥ್ ನಡುವೆ ಸಚಿವ ಸ್ಥಾನಕ್ಕೆ ಪೈಪೋಟಿ ಕಂಡುಬಂದಿದ್ದರೂ ಅಂತಿಮವಾಗಿ ಪನ್ನೀರ್ ಸೆಲ್ವಂ ಅವರ ಪುತ್ರ ಪ್ರಮಾಣ ತೆಗೆದುಕೊಳ್ಳುವುದು ಪಕ್ಕಾ ಆಗಿದೆ.

ಸುಮಾರು 20  ವರ್ಷಗಳ ನಂತರ ಅಂದರೆ 1998ರಲ್ಲಿ ವಾಜಪೇಯಿ ಸರಕಾರದಲ್ಲಿ ಎಐಎಡಿಎಂಕೆ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿತ್ತು.