ಶಬರಿಮಲೆ[ಜ.02]: ಭಾರೀ ಹೋರಾಟ, ಪರ- ವಿರೋಧಗಳ ಬಳಿಕ ಕೊನೆಗೂ ಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಸುಪ್ರೀಂ ತೀರ್ಪಿನ ಬಳಿಕ ಇದೇ ಮೊದಲ ಬಾರಿ ಇಬ್ಬರು ಮಹಿಳಾ ಭಕ್ತರು ಅಯ್ಯಪ್ಪನ ದೇಗುಲ ಪ್ರವೇಶಿಸಿದ್ದಾರೆ.

ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಅಸ್ತು!

ಶತಮಾನಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಹೊಸ ವರ್ಷದ ಆರಂಭದಲ್ಲಿ 40 ವರ್ಷದ ಇಬ್ಬರು ಮಹಿಳೆಯರು ಪೊಲೀಸ್ ಬಿಗಿ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ್ದಾರೆ. ಮಕರ ಸಂಕ್ರಾಂತಿ ವೇಳೆಗೆ ದೇಗುಲ ಪ್ರವೇಶಿಸಬೇಕೆಂಬ ನಿಟ್ಟಿನಲ್ಲಿ ಮಹಿಳಾ ಕ್ರಾಂತಿ ಆರಂಭವಾಗಿತ್ತು. ಆದರೀಗ ತೀವ್ರ ವಿರೋಧದ ನಡುವೆಯೂ ಬುಧವಾರ ಮುಂಜಾನೆ 3.45ಕ್ಕೆ ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ. ದೇಗುಲ ಪ್ರವೇಶಿಸಿದ ಮಹಿಳೆಯರನ್ನು ಕನಕದುರ್ಗಾ ಹಾಗೂ ಬಿಂದು ಎಂದು ಗುರುತಿಸಲಾಗಿದ್ದು, ತಾವು ದೇಗುಲ ಪ್ರವೆಶಿಸುತ್ತಿರುವ ವಿಡಿಯೋವನ್ನು ಖುದ್ದು ಮಹಿಳೆಯರೇ ಬಹಿರಂಗಪಡಿಸಿದ್ದಾರೆ ಹಾಗೂ ಸುಪ್ರೀಂ ತೀರ್ಪಿನ ಬಳಿಕವೂ ಅಸಾಧ್ಯವೆನ್ನಲಾಗುತ್ತಿದ್ದ ಕಾರ್ಯವನ್ನು ಮಾಡಿದ್ದಾರೆ.

4 ಹಿಜಡಾಗಳಿಗೆ ಅಯ್ಯಪ್ಪ ದರ್ಶನಕ್ಕೆ ಸಿಕ್ಕಿತು ಅವಕಾಶ

ಇನ್ನು ಗುರುವಾದಂದು ಮಹಿಳಾ ಸಮಾನತೆ ಹಾಗೂ ದೇಗುಲ ಪ್ರವೇಶಿಸಲು ಅವಕಾಶ ಕಲ್ಪಿಸುವ ಸಲುವಾಗಿ ಬರೋಬ್ಬರಿ 620 ಕಿ. ಮೀಟರ್ ದೂರದ ಬೃಹತ್ ಮಹಿಳಾ ಸರಪಳಿ ನಿರ್ಮಿಸಲಾಗಿತ್ತು ಎಂಬುವುದು ಗಮನಾರ್ಹ. 

ಈ ಮಹಿಳೆಯರಿಗೇಕೆ ಶಬರಿಮಲೆಗೆ ಹೋಗೋ ತವಕ.?

ಶಬರಿಮಲೆಗೆ ಮಗಹಿಳೆಯರಿಗೇಕೆ ಪ್ರವೇಶವಿರಲಿಲ್ಲ?

800 ವರ್ಷಗಳಿಂದ ಕೇರಳದ ಸುಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶವಿರಲಿಲ್ಲ. ಈ ನಿಯಮವನ್ನು ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿತ್ತು. 10 ರಿಂದ 50 ವರ್ಷ ವಯಸ್ಸಿನ ಮಹಿಳೆಯ ಋತುಮತಿಯಾಗುವ ಕಾರಣಕ್ಕೆ ಅವರು ದೇವಾಲಯಕ್ಕೆ ಕಾಲಿಡುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ವಾದಿಸಲಾಗಿತ್ತು.

ಶಬರಿಮಲೆ ಅಯ್ಯಪ್ಪ ದೇಗುಲ ಹೋರಾಟಕ್ಕೆ ಮೊದಲ ಬಲಿ?

ಜುಲೈ 18ರಂದು ಸುಪ್ರೀಂ ಹೇಳಿದ್ದೇನು..? 

  • ಪುರುಷರಂತೆ ಮಹಿಳೆಯರಿಗೂ ದೇವರನ್ನು ಪೂಜಿಸಲು ಅಧಿಕಾರ  ಇದೆ 
  • ಮಹಿಳೆಯರಿಗೆ ದೇಗುಲ ಪ್ರವೇಶ ನಿರ್ಬಂಧಿಸುವುದು ಸರಿಯಲ್ಲ
  • ಮಹಿಳೆಯರ ಪ್ರವೇಶ ನಿರಾಕರಣೆ ಸಂವಿಧಾನಕ್ಕೆ ವಿರೋಧವಾದುದು 
  • ದೇವಸ್ಥಾನ ಖಾಸಗಿ ಸ್ವತ್ತಲ್ಲ, ಯಾರು ಬೇಕಾದರೂ ಪ್ರವೇಶಿಸಬಹುದು 
  • ಧಾರ್ಮಿಕ ನಂಬಿಕೆ ಆಧಾರದಲ್ಲಿ ಮಹಿಳೆಯರ ತಾರತಮ್ಯ ಸರಿಯಲ್ಲ
  • ದೇವರಿಗೆ ಸೇವೆ ಸಲ್ಲಿಸಲು ಪುರುಷರಂತೆ ಮಹಿಳೆಯರೂ ಅರ್ಹರು 
  • ಮಹಿಳೆಯರ ಮುಟ್ಟಿನ ಅವಧಿ ನಿರ್ಧರಿಸುವ ಅಧಿಕಾರ ಕೊಟ್ಟಿದ್ಯಾರು..? 
  • ಯಾವ ಆಧಾರದಲ್ಲಿ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿದೆ..?