Asianet Suvarna News Asianet Suvarna News

ಈ ಮಹಿಳೆಯರಿಗೇಕೆ ಶಬರಿಮಲೆಗೆ ಹೋಗೋ ತವಕ.?

ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಲು ಯತ್ನಿಸುತ್ತಿದ್ದು ಈ ನಿಟ್ಟಿನಲ್ಲಿ ಲೇಖಕಿ ತಸ್ಲೀಮಾ ನಸ್ರೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Why Women Activist  Are So Eager To Enter Sabarimala Says Taslima Nasreen
Author
Bengaluru, First Published Nov 17, 2018, 2:08 PM IST

ನವದೆಹಲಿ :  ಶಬರಿಮಲೆಗೆ ತೆರಳಲು ಮಹಿಳೆಯರು ಯಾಕಿಷ್ಟು ಉತ್ಸಾಹ ತೋರಿಸುತ್ತಿದ್ದಾರೆ ಎನ್ನುವುದು  ಅರ್ಥವಾಗುತ್ತಿಲ್ಲ. ಅದರ ಬದಲಿಗೆ ಮಹಿಳಾ ಹೋರಾಟಗಾರ್ತಿಯರು ಹಳ್ಳಿಗಳಿಗೆ ಪ್ರವೇಶಿಸಲಿ ಎಂದು ಮಹಿಳಾ ಪರ ಹೋರಾಟಗಾರ್ತಿ ಹಾಗೂ ಲೇಖಕಿ ತಸ್ಲಿಮಾ ನಸ್ರೀನ್ ಹೇಳಿದ್ದಾರೆ. 

ಹಳ್ಳಿಗಳಲ್ಲಿ ಮಹಿಳೆಯರು ಕೌಟುಂಬಿಕ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ, ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತಿವೆ.  ಲೈಂಗಿಕ ದೌರ್ಜನ್ಯ ನಡೆಯುತ್ತಿದೆ.  ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣವಿಲ್ಲದೇ  ಸಮಸ್ಯೆ ಎದುರಿಸುತ್ತಿದ್ದಾರೆ, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಸಮಾನ ವೇತನ ಪಡೆಯಲು ಸೂಕ್ತ ಉದ್ಯೋಗ ಪಡೆಯಲು ಪರದಾಡುವಂತಹ ಸ್ಥಿತಿ ಇದೆ ಎಂದು ಟ್ವೀಟ್ ಮಾಡಿದ್ದಾರೆ. 

ಶಬರಿಮಲೆ ದೇಗುಲವನ್ನು ಭಕ್ತರ ದರ್ಶನಕ್ಕೆ ತೆರೆಯಲಾಗಿದ್ದು, ಈಗಾಗಲೇ ಅನೇಕ ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಿದ ನಿಟ್ಟಿನಲ್ಲಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ. 

ಮಹಿಳೇ ಪ್ರವೇಶವನ್ನು ವಿರೋಧಿಸಿ ಅನೇಕರು ತೀವ್ರ ಪ್ರತಿಭಟನೆ ನಡೆಸಿದ್ದು, ಗಲಭೆ ರೀತಿಯ ವಾತಾವರಣವನ್ನೇ ಸೃಷ್ಟಿ ಮಾಡಿತ್ತು. 10ರಿಂದ 50 ವರ್ಷ ಒಳಗಿನ ಮಹಿಳೆಯರು ಪ್ರವೇಶಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಶಬರಿಮಲೆ ಸುತ್ತಮುತ್ತಲೂ ಕೂಡ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. 

 

Follow Us:
Download App:
  • android
  • ios