ಅಯ್ಯಪ್ಪ ದರ್ಶನ ಪಡೆಯಲು ತೆರಳುತ್ತಿದ್ದ ವೇಳೆ ತಡೆಯಲಾಗಿದ್ದ 4 ಹಿಜಡಾಗಳಿಗೆ ಕೊನೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ತಿರುವನಂತಪುರ[ಡಿ.18]: ಭಾನುವಾರ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆಂದು ತೆರಳುತ್ತಿದ್ದ ವೇಳೆ ಪೊಲೀಸರಿಂದ ತಡೆಯಲ್ಪಟ್ಟಿದ್ದ ನಾಲ್ವರು ಹಿಜಡಾಗಳಿಗೆ, ಕೊನೆಗೂ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಲ್ವರು ಮಂಗಳಮುಖಿಯರು ಸೋಮವಾರ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಅವರಿಗೆ ಸೂಕ್ತ ಸಮಯದಲ್ಲಿ ತೆರಳಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.

ಶಬರಿಮಲೆ ಪ್ರವೇಶಕ್ಕೆ ತೃತೀಯ ಲಿಂಗಿಗಳಿಗೆ ವಿರೋಧ

ಈ ಹಿಂದೆಯೂ ಹಿಜಡಾಗಳು ದೇಗುಲಕ್ಕೆ ತೆರಳಿದ್ದಾರೆ. ಅವರಿಗೆ ಯಾವುದೇ ಅಡ್ಡಿ ಇಲ್ಲ. ಹೀಗಾಗಿ ಅವರಿಗೆ ಅವಕಾಶ ಮಾಡಿಕೊಡಲಾಗುವುದು. ಈ ನಾಲ್ವರನ್ನು ಪೊಲೀಸರು ಮಹಿಳೆಯರೆಂದು ತಪ್ಪಾಗಿ ಭಾವಿಸಿ ಅವರಿಗೆ ಅನುಮತಿ ನಿರಾಕರಿಸಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.