ಗಡಿಯ ಮಾಯ್ಶಲ್ ಗ್ರಾಮದ ಚರಂಡಿಯಲ್ಲಿ ನೀಲಿ ಪ್ಲಾಸ್ಟಿಕ್ ಚೀಲದಲ್ಲಿದ್ದ ಭ್ರೂಣಗಳನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ್ದಾರೆ. ಚರಂಡಿಯ ಅನತಿ ದೂರದಲ್ಲಿಯೇ ಖಾಸಗಿ ಕ್ಲಿನಿಕ್ ಇದ್ದು, ಇಲ್ಲಿನ ಮಹಿಳಾ ವೈದ್ಯೆಯೇ ಈ ಭ್ರೂಣ ಹತ್ಯೆಗಳನ್ನು ಮಾಡಿ ಚರಂಡಿಯಲ್ಲಿ ಎಸೆದಿರುವ ಸಾಧ್ಯತೆಯಿದೆ.

ಸಾಂಗ್ಲಿ(ಮಾ.06): ರಾಜ್ಯಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರ ಗಡಿಯ ಗ್ರಾಮದ ಚರಂಡಿಯಲ್ಲಿ 19 ಭ್ರೂಣಗಳು ಪತ್ತೆಯಾಗಿವೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಡಿಯ ಮಾಯ್ಶಲ್ ಗ್ರಾಮದ ಚರಂಡಿಯಲ್ಲಿ ನೀಲಿ ಪ್ಲಾಸ್ಟಿಕ್ ಚೀಲದಲ್ಲಿದ್ದ ಭ್ರೂಣಗಳನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿದ್ದಾರೆ. ಚರಂಡಿಯ ಅನತಿ ದೂರದಲ್ಲಿಯೇ ಖಾಸಗಿ ಕ್ಲಿನಿಕ್ ಇದ್ದು, ಇಲ್ಲಿನ ಮಹಿಳಾ ವೈದ್ಯೆಯೇ ಈ ಭ್ರೂಣ ಹತ್ಯೆಗಳನ್ನು ಮಾಡಿ ಚರಂಡಿಯಲ್ಲಿ ಎಸೆದಿರುವ ಸಾಧ್ಯತೆಯಿದೆ.

ಭ್ರೂಣಗಳು ಸಿಕ್ಕಿದ ದಿನದಿಂದ ಮಹಿಳಾ ವೈದ್ಯೆ ನಾಪತ್ತೆಯಾಗಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಗರ್ಭಪಾತ ಮಾಡಿಸಿಕೊಂಡ ನಂತರ ಸಾವೀಗೀಡಗಿದ್ದು, ಆನಂತರ ಪ್ರಕರಣ ಬೆಳಕಿಗೆ ಬಂದಿದೆ. ಗಡಿ ಗ್ರಾಮವಾದ ಕಾರಣ ರಾಜ್ಯದಿಂದಲೂ ಭ್ರೂಣ ಹತ್ಯೆಗಳು ನಡೆದಿರುವ ಸಾಧ್ಯತೆಯಿದ್ದು, ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ರಾಜ್ಯ ಸರ್ಕಾರದ ನೆರವನ್ನು ಕೋರಿದೆ.