ಬೆಂಗಳೂರು[ಫೆ.22] ಕಳೆದ 48 ಗಂಟೆಗಳ ಅವಧಿಯಲ್ಲಿ ರಾಜ್ಯ ಸರಕಾರ 17 ಐಎಎಸ್, 33 ಐಪಿಎಸ್, ಒಬ್ಬರು ಕೆಎಎಸ್ ಅಧಿಕಾರಿಗಳ ಸ್ಥಾನ ಪಲ್ಲಟ ಮಾಡಿದೆ.ಹಾಗಾದರೆ ಇಂಥ ಮೇಜರ್ ಸರ್ಜರಿಗೆ ಕಾರಣ ಏನು? ಉತ್ತರ ಬಹಳ ಸರಳ.. ಅದು ಲೋಕಸಭಾ ಚುನಾವಣೆ.

ಖಡಕ್ ಡಿಸಿ, ಜನ ಮೆಚ್ಚಿದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ

ಲೋಕಸಭಾ ಚುನಾವಣೆ ಅಧಿಸೂಚನೆ ಪ್ರಕಟವಾದರೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ ಎಂಬುದನ್ನು ಮನಗಂಡ ಸರಕಾರ ಈಗಲೇ ಆಯಕಟ್ಟಿನ ಸ್ಥಾನ ಭದ್ರ ಮಾಡಿಕೊಳ್ಳುತ್ತಿದೆ.

ನಾಗರಿಕರ ಒತ್ತಡ ಕೇಳಿಬಂದ ನಂತರ ಅಣ್ಣಾಮಲೈ ಅವರ ವರ್ಗಾವಣೆ ಆದೇಶವನ್ನು ಮಾತ್ರ ಹಿಂದಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ವರ್ಗಾವಣೆ ಪರ್ವ ನಿಲ್ಲುವಂತೆಯೂ ಕಾಣುತ್ತಿಲ್ಲ.