ಜೀವನ ಪರೀಕ್ಷೆ: SSLC ಫಲಿತಾಂಶಕ್ಕೆ ಕಾಯುತ್ತಿದ್ದ ಬಾಲಕಿಗೆ ವಿವಾ​ಹ

16ರ ಬಾಲ​ಕಿಗೆ 32 ವರ್ಷದ ವರ​ನೊಂದಿಗೆ ವಿವಾ​ಹ| SSLC ಫಲಿತಾಂಶ ಕಾದಿದ್ದ ಯುವತಿಗೆ ಕಂಕಣ ಭಾಗ್ಯ

16 Years Girl Married To 32 years Old man

ಚಿಕ್ಕಬಳ್ಳಾಪುರ[ಏ.29]: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ 16 ವರ್ಷದ ಬಾಲಕಿಯೊಬ್ಬಳನ್ನು 32 ವರ್ಷದ ವರನಿಗೆ ಕೊಟ್ಟು ಮದುವೆ ಮಾಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಯಗವಬಂಡ್ಲಕೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಬಾಲಕಿಯ ವಿವಾಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ವರ​ನೊಂದಿಗೆ ಶನಿವಾರ ಹಾಗೂ ಭಾನುವಾರ ಅದ್ಧೂರಿಯಾಗಿ ನೆರವೇರಿದೆ.

ವಿಪರ್ಯಾಸವೆಂದರೆ ಮದುವೆ ಮುಗಿದ ಬಳಿಕ ವಧು-ವರರ ಜತೆಗೆ ನೆಂಟರೆಲ್ಲರೂ ತೆರಳಿದ ಬಳಿಕ ಗ್ರಾಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲವು ದಿನಗಳಿಂದ ಮದುವೆಗೆ ಸಿದ್ಧತೆ ಕೈಗೊಳ್ಳಲಾಗಿತ್ತು, ಆಹ್ವಾನ ಪತ್ರಿಕೆ ಸಹ ಹಂಚಲಾಗಿತ್ತು. ಆದಾಗ್ಯೂ ಎಲ್ಲಾ ಮುಗಿದ ಮೇಲೆ ಅಧಿಕಾರಿಗಳು ಆಗಮಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

Latest Videos
Follow Us:
Download App:
  • android
  • ios