ರಾಜ್ಯ ಗುಪ್ತಚರ ಇಲಾಖೆಗೆ ಪ್ರತ್ಯೇಕ ನೇಮಕ ಆರಂಭಿಸಲಾಗಿದ್ದು, ಸದ್ಯದಲ್ಲೇ 41 ಮಂದಿ ಪಿಎಸ್‌ಐ ನೇಮಕ ಪ್ರಕ್ರಿಯೆ ಮುಗಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪೊಲೀಸ್‌ ಗುಪ್ತಚರ ಎನ್ನುವುದು ಇಲಾಖೆಯ ಪ್ರಮುಖ ವಿಭಾಗ. ಸರ್ಕಾರವು ಸೂಕ್ತ ಮಾಹಿತಿ, ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ಕಾನೂನು ಸುವ್ಯವಸ್ಥೆ ನೋಡಿ ಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ಗುಪ್ತಚರ ಇಲಾಖೆಗೆ ಪ್ರತ್ಯೇಕ ನೇಮಕ ಆರಂಭಿಸಲಾಗಿದೆ. ಸದ್ಯ 41 ಪಿಎಸ್‌ಐಗಳ ನೇಮಕ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಮೌಖಿಕ ಪರೀಕ್ಷೆ ಮಾತ್ರ ಬಾಕಿ ಇದೆ. ಇದೇ ರೀತಿ ಮುಂದಿನ ವರ್ಷವೂ ನೇಮಕ ಮಾಡಲಾಗುತ್ತದೆಂದು ಉತ್ತರಿಸಿದರು. 

ಬೆಂಗಳೂರು(ಮಾ.22):  ರಾಜ್ಯ ಗುಪ್ತಚರ ಇಲಾಖೆಗೆ ಪ್ರತ್ಯೇಕ ನೇಮಕ ಆರಂಭಿಸಲಾಗಿದ್ದು, ಸದ್ಯದಲ್ಲೇ 41 ಮಂದಿ ಪಿಎಸ್‌ಐ ನೇಮಕ ಪ್ರಕ್ರಿಯೆ ಮುಗಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪೊಲೀಸ್‌ ಗುಪ್ತಚರ ಎನ್ನುವುದು ಇಲಾಖೆಯ ಪ್ರಮುಖ ವಿಭಾಗ. ಸರ್ಕಾರವು ಸೂಕ್ತ ಮಾಹಿತಿ, ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ಕಾನೂನು ಸುವ್ಯವಸ್ಥೆ ನೋಡಿ ಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ಗುಪ್ತಚರ ಇಲಾಖೆಗೆ ಪ್ರತ್ಯೇಕ ನೇಮಕ ಆರಂಭಿಸಲಾಗಿದೆ. ಸದ್ಯ 41 ಪಿಎಸ್‌ಐಗಳ ನೇಮಕ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಮೌಖಿಕ ಪರೀಕ್ಷೆ ಮಾತ್ರ ಬಾಕಿ ಇದೆ. ಇದೇ ರೀತಿ ಮುಂದಿನ ವರ್ಷವೂ ನೇಮಕ ಮಾಡಲಾಗುತ್ತದೆಂದು ಉತ್ತರಿಸಿದರು. 

ವಿಧಾನಸಭೆ: ರಾಜ್ಯ ಸರ್ಕಾರ ‘ಪೊಲೀಸ್‌ ಗೃಹ 20-20' ಎಂಬ ಯೋಜನೆಯಡಿ ಈ ವರ್ಷ 11000 ವಸತಿ ಗೃಹಗಳನ್ನು ನಿರ್ಮಿಸುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಡಾ. ರಫೀಕ್‌ ಅಹ್ಮದ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಪೊಲೀಸ್‌ ಗೃಹ 20-20' ಯೋಜನೆಯಡಿ ಮೂರು ಹಂತದಲ್ಲಿ ಪೊಲೀಸರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಲ್ಲಿ 11 ಸಾವಿರ ಮನೆಗಳನ್ನು ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.ತುಮಕೂರಿನಲ್ಲಿ ಎರಡನೇ ಹಂತದ ಕಾಮಗಾರಿ ಆರಂಭಿಸಲಾಗಿದೆ. ಇದರಲ್ಲಿ 24 ಪೇದೆಗಳಿಗೆ ಮತ್ತು 6 ಪಿಎಸ್‌ಐಗಳಿಗೆ ವಸತಿ ಗೃಹ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಪೊಲೀಸರೆಂದರೆ ಕಟ್ಟುಮಸ್ತಾದ, ಅಜಾನು ಬಾಹು, ಸ್ಫುರದ್ರೂಪಿ ಮತ್ತು ಸದೃಢ ದೇಹದ ವ್ಯಕ್ತಿತ್ವ ಹೊಂದಿದ ಹೀರೋಗಳನ್ನು ಸಿನಿಮಾ ಗಳಲ್ಲಿ ನೋಡುತ್ತೇವೆ. ಆದರೆ ರಾಜ್ಯ ಸರ್ಕಾ ರವೇ ನೀಡಿದ ವರದಿಯಲ್ಲಿ ನಮ್ಮ ರಾಜ್ಯದ ಪೊಲೀಸರು ಸಿನಿಮಾದಲ್ಲಿ ರುವ ಪೊಲೀಸರಂತಲ್ಲ. ಪೇದೆಯಿಂದ ಡಿವೈಎಸ್ಪಿ ಹಂತದವರೆಗೆ ನಮ್ಮ ರಾಜ್ಯದ ಒಟ್ಟು ಪೊಲೀಸರಲ್ಲಿ ಶೇ.25ಕ್ಕೂ ಹೆಚ್ಚು ಪ್ರಮಾಣದ ಪೊಲೀಸರು ರಕ್ತದೊತ್ತಡ (ಬಿ.ಪಿ.) ಮತ್ತು ಮಧುಮೇಹದಂಥ (ಶುಗರ್‌) ಅವೈಜ್ಞಾನಿಕ ಜೀವನ ಶೈಲಿಯ ರೋಗಗಳಿಗೆ ತುತ್ತಾಗಿದ್ದಾರೆ. ಒಟ್ಟು 82 ಸಾವಿರ ಪೊಲೀಸರಲ್ಲಿ 4,506 ಮಂದಿ ಬಿ.ಪಿ.ಯಿಂದ, 3,712 ಮಂದಿ ಶುಗರ್‌ನಿಂದಲೂ, ಆಶ್ಚರ್ಯ ವೆಂದರೆ 7,050 ಮಂದಿ ಬಿಪಿ ಮತ್ತು ಶುಗರ್‌ ಎರಡರಿಂದಲೂ ಬಳಲುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರೇ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆ ಯಲ್ಲಿ ಕುಡಚಿ ಶಾಸಕ ಪಿ. ರಾಜೀವ್‌ ಪ್ರಶ್ನೆಗೆ ಗೃಹ ಸಚಿವರು ಈ ಬಗ್ಗೆ ಲಿಖಿತ ಉತ್ತರ ನೀಡಿದ್ದಾರೆ. ಪ್ರತಿ ವರ್ಷ ತಲಾ .1,000 ಅನುದಾನದಲ್ಲಿ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ (ಐಪಿಎಸ್‌ ಅಧಿಕಾರಿಗಳನ್ನು ಹೊರತುಪಡಿಸಿ) ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಬಿಪಿ ಮತ್ತು ಶುಗರ್‌ ಬರಲು ಕೆಲಸದ ಒತ್ತಡ ಕೂಡ ಕಾರಣ ಇರಬಹುದು ಎಂದು ಹೇಳಿದ್ದಾರೆ. ಕೆಲಸದ ಒತ್ತಡ ಕಡಿಮೆ ಮಾಡಲು ಕಡ್ಡಾಯ ವಾರದ ರಜೆ, ಬಂದೋಬಸ್‌್ತ ಮುಂತಾದ ಕರ್ತವ್ಯಕ್ಕೆ ನಿಯೋಜಿಸುವಾಗ ಸಿಬ್ಬಂದಿಯ ಆರೋಗ್ಯ ಸ್ಥಿತಿಯನ್ನು ಪರಿಗಣಿಸಲಾಗುತ್ತಿದೆ. ಕೆಲಸದ ಒತ್ತಡ ಕಡಿಮೆಯಾಗುವಂತೆ ಕರ್ತವ್ಯವನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ವರದಿ: ಕನ್ನಡ ಪ್ರಭ