ಬಿಗ್'ಬ್ಯಾಶ್'ನಲ್ಲಿ ಶ್ರೀಲಂಕಾ ಬೌಲರ್ ಲಸಿತ್ ಮಲಿಂಗಾ 7 ಚಂಡುಗಳಲ್ಲಿ 6 ವಿಕೆಟ್ ಪಡೆದಿದ್ದರು. 2017 ಜನವರಿ 26 ರಂದು ಆಸ್ಟ್ರೇಲಿಯ ಕೌಂಟಿ ಕ್ರಿಕೆಟ್'ನಲ್ಲಿ ಆಡಿದ ಅಲೆಡ್ ಕಾರೆ ಒಂದೇ ಓವರ್'ನಲ್ಲಿ 6 ವಿಕೆಟ್ ಪಡೆದಿದ್ದರು.

ಲಂಡನ್(ಆ.11): ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಬೌಲರ್ ಒಬ್ಬ 6 ಚಂಡುಗಳಲ್ಲಿ 6 ವಿಕೆಟ್ ಪಡೆದಿದ್ದಾನೆ.

ಇಂಗ್ಲೆಂಡ್'ನ ಫೆಲಿಡೆಲ್ಫಿಯಾ ಕ್ರಿಕೆಟ್ ಕ್ಲಬ್'ನ 13 ವರ್ಷದೊಳಗಿನ ಬೌಲರ್ 'ಲ್ಯೂಕ್ ರಾಬಿನ್'ಸನ್' ಒಂದೇ ಓವರ್'ನಲ್ಲಿ 6 ವಿಕೆಟ್ ಪಡೆದಿದ್ದಾನೆ. ಈ ರೀತಿ ದಾಖಲೆ ಮಾಡಿರುವುದು ಬೆರಳೆಣಿಕೆಯಷ್ಟು ಮಾತ್ರ.ಅಂತರ'ರಾಷ್ಟ್ರೀಯ ಪಂದ್ಯಗಳಲ್ಲಿ ಯಾರೊಬ್ಬರೂ ಈ ರೀತಿಯ ದಾಖಲೆಯನ್ನು ಇಲ್ಲಿಯವರೆಗೂ ಮಾಡಿಲ್ಲ.

ಕೌಂಟಿ ಕ್ರಿಕೆಟ್' ಪಂದ್ಯಗಳಲ್ಲಿ ಮಾತ್ರ 6 ಚಂಡು'ಗಳಲ್ಲಿ 6 ವಿಕೆಟ್ ಪತನವಾಗಿದೆ. ಆಸ್ಟ್ರೇಲಿಯಾದ ಬಿಗ್'ಬ್ಯಾಶ್'ನಲ್ಲಿ ಶ್ರೀಲಂಕಾ ಬೌಲರ್ ಲಸಿತ್ ಮಲಿಂಗಾ 7 ಚಂಡುಗಳಲ್ಲಿ 6 ವಿಕೆಟ್ ಪಡೆದಿದ್ದರು. 2017 ಜನವರಿ 26 ರಂದು ಆಸ್ಟ್ರೇಲಿಯ ಕೌಂಟಿ ಕ್ರಿಕೆಟ್'ನಲ್ಲಿ ಆಡಿದ ಅಲೆಡ್ ಕಾರೆ ಒಂದೇ ಓವರ್'ನಲ್ಲಿ 6 ವಿಕೇಟ್ ಪಡೆದಿದ್ದರು.